ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪ ಮಾಗಣೆಯ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನದ ಅನ್ನಛತ್ರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ನೆರವೇರಿಸಿದರು.
ಸಜೀಪ ಮಾಗಣೆಯ ನಡಿಯೇಲು ದೈವಂಗಂಳು ಉಳ್ಳಾಲ್ತಿ, ನಾಲ್ಕೈತ್ತಾಯ ಕ್ಷೇತ್ರಕ್ಕೆ ಸಂಬಂಧಪಟ್ಟ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಅನ್ನಛತ್ರ ನಿರ್ಮಾಣವಾಗುತ್ತಿದೆ ಎಂದು ಹೇಳಿದ ಅವರು, ಪಣೋಲಿಬೈಲು ಕ್ಷೇತ್ರದ ಭಕ್ತರಿಗೆ ಅನ್ನಪ್ರಸಾದ ನೀಡುವ ಹಲವು ವರ್ಷಗಳ ಯೋಜನೆಯನ್ನು ಸಾಹಕಾರಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಸುಮಾರು 1 ಕೋಟಿ ರೂ ವೆಚ್ಚದ ಅನ್ನಛತ್ರಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದೆ ಕಟ್ಟಡ ಪೂರ್ಣಗೊಂಡ ಬಳಿಕ ಜಿಲ್ಲೆಯ ಎ.ಗ್ರೇಡ್ ದೇವಸ್ಥಾನ ದಂತೆ ಭಕ್ತರಿಗೆ ಅನ್ನಪ್ರಸಾದ ನೀಡುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಸಜೀಪಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಸಜೀಪಗುತ್ತಿನ ಗಡಿಪ್ರಧಾನರಾದ ಮುಂಡಪ್ಪ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ, ಮೋನಪ್ಪ ಮೂಲ್ಯ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ, ಜಿ.ಪಂ.ಮಾಜಿ ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಜಯರಾಮ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ಉದಯಕುಮಾರ್ ಕಾಂಜಿಲ, ಶಿವಪ್ರಸಾದ್ ಶೆಟ್ಟಿ, ಲೋಹಿತ್ ಪಣೋಲಿಬೈಲು, ಯಶವಂತ ನಾಯ್ಕ್ ನಗ್ರಿ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಶೆಟ್ಟಿ ವಾಮದಪದವು, ರತ್ನಾಕರ ನಾಡಾರು, ರಮೇಶ್ ಕುಲಾಲ್ ಪಣೋಲಿಬೈಲು, ರಮೇಶ್ ಭಂಡಾರಮನೆ ಮೊದಲಾದವರಿದ್ದರು