FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ಸಹೋದರರ ನಡುವಿನ ಗಲಾಟೆ ಬಳಿಕ ತಮ್ಮನನ್ನು ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಐತಪ್ಪ ನಾಯ್ಕ(47) ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನ್ನನ್ನು ಕೊಲೆಗೈದ ಘಟನೆ ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯಾದ ಐತ್ತಪ್ಪ ನಾಯ್ಕ (47) ಎಂಬಾತನನ್ನು ಬಂಧಿಸಲಾಯಿತು ಎಂದು ತಿಳಿಸಿರುವ ಪೊಲೀಸರು, ಘಟನೆಗೆ ಕಾರಣವನ್ನು ನೀಡಿದ್ದಾರೆ. ಬಾಳಪ್ಪ ನಾಯ್ಕ ಪ್ರಸ್ತುತ ಎಣ್ಮಕಜೆ ಗ್ರಾಮದ ಅಡ್ಯನಡ್ಕದಲ್ಲಿ ವಾಸವಾಗಿದ್ದು ತರವಾಡು ಮನೆಯಲ್ಲಿ ಗೊಂದೋಳು ಪೂಜೆ ಗೆಂದು ತನ್ನ ಹಳೆಯ ಮನೆಗೆ ತಾಯಿ ಜೊತೆಗೆ ಬಂದಿದ್ದ. ಈ ವೇಳೆ ಸಹೋದರರಿಬ್ಬರೂ ತಕಾರಾರು ಇರುವ ಜಾಗದಲ್ಲಿ ಬೆಳೆದ ಭತ್ತ ಫಸಲಿನಲ್ಲಿ ಪಾಲು ಕೇಳಿದ ವಿಚಾರವಾಗಿ ಗಲಾಟೆ ನಡೆಸಿದ್ದಾರೆ. ಜಗಳ ತಾರಕ್ಕಕ್ಕೇರಿದ್ದು, ಅಣ್ಣ ತಮ್ಮನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ ಸೋನಾವಣೆ ಮತ್ತು ಅಡಿಷನಲ್ ಎಸ್‌ಪಿ ಕುಮಾರಚಂದ್ರ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್ ಈ ನೇತೃತ್ವದಲ್ಲಿ ಪಿ ಎಸ್ ಐ ಮಂಜುನಾಥ ಟಿ, ಪ್ರೊಬೆಷನರಿ ಪಿ ಎಸ್ ಐ ಗಳಾದ ಧನಂಜಯ, ಬಿ.ಸಿ, ಜಯಶ್ರೀ ಪ್ರಭಾಕರ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದೆ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…