FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ದಡ್ಡಲಕಾಡು ಸಂಭ್ರಮೋತ್ಸವ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಕೈಕಂಬ ದ್ವಾರದಿಂದ ದಡ್ಡಲಕಾಡು ಶಾಲೆಗೆ ವಿದ್ಯಾದೇಗುಲ ಹೊರೆಕಾಣಿಕೆಯೊಂದಿಗೆ ವಿಶೇಷ ವಾಹನ ಜಾಥಾ ಶನಿವಾರ ಬೆಳಗ್ಗೆ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕಾಲ್ನಡಿಗೆಯಲ್ಲಿ ಬಿ.ಸಿ.ರೋಡ್ ವರೆಗೆ ತೆರಳಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಜಾಗೃತಿಯನ್ನು ಮೂಡಿಸುವ ಸಲುವಾಗಿ ಮತ್ತು ಏಕರೂಪದ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಹರ್ಷೋತ್ಸವವಾಗಿ ವಿಶೇಷ ವಾಹನ ಜಾಥಾ ನಡೆಯುತ್ತಿದೆ ಎಂದು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷ ಹಾಗೂ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.
ಈ ಸಂದರ್ಭ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ತುಂಗಪ್ಪ ಬಂಗೇರ, ದೇವಪ್ಪ ಪೂಜಾರಿ, ಶೇಖರ್ ಅಂಚನ್, ಪುರುಷೋತ್ತಮ ಅಂಚನ್, ಭುವನೇಶ್ ಪಚ್ಚಿನಡ್ಕ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಸಂತೋಷ್ ರಾಯಿಬೆಟ್ಟು, ರಮನಾಥ ರಾಯಿ, ಮುಖ್ಯೋಪಾಧ್ಯಾಯ ರಮಾನಂದ ಮತ್ತಿತರರು ಉಪಸ್ಥಿತರಿದ್ದು ಜಾಥಾದಲ್ಲಿ ಪಾಲ್ಗೊಂಡರು.