FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಕನ್ಯಾನದಲ್ಲಿ ಸಾವಿಗೀಡಾದ ಬಾಲಕಿ ಮನೆಗೆ ಬಂಟ್ವಾಳ ಶಾಸಕ ,ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶುಕ್ರವಾರ ಭೇಟಿ ನೀಡಿ, ಬಾಲಕಿ ಮನೆಯವರೊಂದಿಗೆ ಮಾತುಕತೆ ನಡೆಸಿದರು. ಪ್ರಕರಣದ ತನಿಖೆಯನ್ನು ಪೋಲಿಸ್ ಇಲಾಖೆ ನಡೆಸುತ್ತಿದ್ದು ತಪ್ಪಿತಸ್ಥನಿಗೆ ಈ ನೆಲದ ಕಾನೂನಿನಡಿಯಲ್ಲೇ ಶಿಕ್ಷೆಯಾಗಲಿದೆ ಎಂದರು. ಪೋಷಕರಿಗೆ ಬಂಟ್ವಾಳ ಬಿಜೆಪಿ ಕ್ಷೇಮನಿಧಿಯಿಂದ ನೂತನ ಮನೆ ನಿರ್ಮಿಸುವುದಾಗಿ ಸ್ಥಳದಲ್ಲಿಯೇ ಶಾಸಕರು ಘೋಷಣೆ ಮಾಡಿದರು.ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಮಂಡಲದ ಪದಾಧಿಕಾರಿಗಳು,ಸಂಘ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.