ಕಲ್ಲಡ್ಕ

ವೀರಕಂಭದ ಮಜಿ ಶಾಲೆಯಲ್ಲಿ ಹಬ್ಬದ ವಾತಾವರಣ ಮೂಡಿಸಿದ ಶತಮಾನೋತ್ಸವ ಕಾರ್ಯಕ್ರಮ

FOR ADVERTISEMENTS PLEASE CONTACT: HARISH MAMBADY, 9448548127

ವೀರಕಂಭ: ದ ಕ ಜಿ ಪಂ ಹಿ ಪ್ರಾ ಶಾಲೆ ಮಜಿ ವೀರಕಂಭದ ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ನಿಧಿಯಿಂದ ನಿಮಾ೯ಣಗೊಂಡ 10 ಕೊಠಡಿಗಳ ಹಾಗೂ ಮಜಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶತಮಾನೋತ್ಸವ ಸಮಿತಿಗಳ ವತಿಯಿಂದ ಸುಮಾರು 10.5 ಲಕ್ಷ ವೆಚ್ಚದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸಿದ್ದರು. ವಿಧಾನಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ‌ ಯವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್, ಸರಕಾರಿ ಶಾಲೆ ಉಳಿಸಿ ಬೆಳೆಸಿ ಎಂಬ ರಾಜ್ಯ ಸಮಿತಿಯ ಅಧ್ಯಕ್ಷ ಪ್ರಕಾಶ್ ಅಂಚನ್,  ತಾಲೂಕು ಪಂಚಾಯತ್ ಮಾಜಿ ಸದಸ್ಯ  ಮಾಧವ ಮಾವೆ, ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ  ದಿನೇಶ್, ತಾಲೂಕು ಪಂಚಾಯತನ ಮಾಜಿ ಸದಸ್ಯರಾದ ಗೀತಾ ಚಂದ್ರಶೇಖರ್, ಶತಮಾನೋತ್ಸವದ ಸಮಿತಿಯ ಅಧ್ಯಕ್ಷರಾದ ನಿವೃತ್ತ ಮುಖ್ಯ ಶಿಕ್ಷಕ ಕೆ ವಿಠಲ ಶೆಟ್ಟಿ, ಶಾಲೆಯ ಸ್ಥಳ ದಾನಿಗಳ ಕುಟುಂಬಸ್ಥರಾದ ತಿರುಮಲ ಕುಮಾರ್ ಮಜಿ, ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುತ್ತಿಗೆದಾರ ಸಂದೀಪ್ ಕುಮಾರ್ ಶೆಟ್ಟಿ ,ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಮಂಜುನಾಥ್ , ಶಾಲೆಯಲ್ಲಿ ಹಿಂದೆ ಕರ್ತವ್ಯ ಸಲ್ಲಿಸಿದ್ದ ಹಾಗೂ ಹಾಲಿ ಕರ್ತವ್ಯ ಸಲ್ಲಿಸುತ್ತಿರುವ ಶಿಕ್ಷಕರನ್ನು, ಅಡುಗೆ ಸಿಬ್ಬಂದಿ ಆಯಾ ಅವರನ್ನೂ ಸನ್ಮಾನಿಸಲಾಯಿತು . ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಮೂಲ್ಯ ,ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ  ರಮೇಶ್ ಗೌಡ ಮತ್ತು ಕಾರ್ಯದರ್ಶಿ ಚಿನ್ನಾ ಮೈರ , ಕಳೆದ  5  ವರ್ಷಗಳಿಂದ ಅಕ್ಷರ ದಾಸೋಹಕ್ಕೆ ಉಚಿತ ತರಕಾರಿ ನೀಡಿ ಸಹಕರಿಸುತ್ತಿರುವ ಮಹಮ್ಮದ್ ಶರೀಫ್ ಮತ್ತು ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳ ಬೆಳಗಿನ ಉಪಹಾರಕ್ಕೆ ಸಹಕರಿಸುತ್ತಿರುವ ಪ್ರಸಾದ್ ನಂದಂತಿಮಾರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

 ಶತಮಾನದ ಭವ್ಯ ಶಿಕ್ಷಣ ದ ಇತಿಹಾಸದ ವಷ೯ಗಳ ಮೇಲೆ ಬೆಳಕು ಚೆಲ್ಲುವ ನೆನಪಿನ ಹೊತ್ತಿಗೆ ಸ್ಮರಣ ಸಂಚಿಕೆ ಶತಸ್ಮರಣೆಯನ್ನು ಬಿಡುಗಡೆ ಮಾಡಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ಯತಿನ್ ಕೊಂಬಿಲ ಬಿಡಿಸಿದ ವರ್ಣಚಿತ್ರವನ್ನು ಅನಾವರಣಗೊಳಿಸಲಾಯಿತು , ಕಾರ್ಯಕ್ರಮದಲ್ಲಿ ಕಲಿಕೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿನ  ಮಕ್ಕಳಿಗೆ ಬಹುಮಾನ ನೀಡಲಾಯಿತು.

ಮುಖ್ಯ ಶಿಕ್ಷಕ  ನಾರಾಯಣ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಶಾಲಾ ವರದಿಯನ್ನು ವಾಚಿಸಿದರು .ಶತಮಾನೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಎಂ ಸ್ವಾಗತಿಸಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ ವಂದಿಸಿ ಉದಯ ಕುಮಾರ್ ಕೆಲಿಂಜ ಹಾಗೂ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು

ಸಭಾ ಕಾಯ೯ಕ್ರಮದ ಬಳಿಕ ಸ್ಥಳೀಯ ಅಂಗನವಾಡಿ ಪುಟಾಣಿ,  ಶಾಲಾ ಮಕ್ಕಳ ಹಾಗೂ ಹಿರಿಯ ವಿಧ್ಯಾಥಿ೯ ಗಳ ಸಾಂಸ್ಕ್ರತಿಕ ಕಾಯ೯ಕ್ರಮ ನಡೆದವು‌ ನಂತರದಲ್ಲಿ ತಾ ತಾಂಬೂಲ  ಕಲಾವಿದರು ಪುಂಜಾಲಕಟ್ಟೆ ಇವರ ಇಂಚಲಾ ಉಂಡಾ ಎಂಬ ಹಾಸ್ಯಮಯ ನಾಟಕ ಪ್ರದಶಿ೯ಸಲಾಯಿತು. ಶಾಲಾ ಶತಮಾನೋತ್ಸವ  ಊರ ಹಬ್ಬವಾಗಿ ಕಂಡುಬಂದಿದ್ದು  ಹೊಸ ಕಟ್ಟಡವು ಹಿಂದಿನ ಪಾರಂಪರಿಕ ಶೈಲಿಯ ಗುತ್ತಿನ ಮನೆ ತರಹ ಕಟ್ಟಲಾಗಿದ್ದು ಕಟ್ಟಡದ ಅಂದ ಹೆಚ್ಚಿಸಲು ಶಾಲಾ ಹಳೆವಿದ್ಯಾರ್ಥಿ ಶಿವನಂದ ಉಚಿತವಾಗಿ ಗಾರ್ಡನ್ ಮಾಡಿಕೊಟ್ಟಿದ್ದು, ಪೂರ್ಣವಾಗಿ ವಿದ್ಯುತ್ ದೀಪ ಹಾಗೂ ತಳಿರು-ತೋರಣಗಳಿಂದ ತೋರಣಗಳಿಂದ ಅಲಂಕೃತಗೊಂಡು ಬಂದ ಶಾಲಾ ಅಭಿಮಾನಿಗಳಿಗೆ ಸಾಯಂಕಾಲದ ಪಲಹಾರ ಹಾಗೂ ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts