FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿಯ ಬಳಿಯಿಂದ ಕ್ಷೇತ್ರಕ್ಕೆ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಹೊರೆಕಾಣಿಕೆಯ ಜತೆಗೆ ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ಶ್ರೀ ಅನ್ನಪೂರ್ಣೇಶ್ವರೀ, ಶ್ರೀ ಶಾಸ್ತರ ದೇವರು ಪ್ರಧಾನ ವಿಗ್ರಹಗಳು, ಪ್ರಧಾನ ಮುಗುಳಿಗಳು, ಉತ್ಸವಮೂರ್ತಿ, ಪುಷ್ಪಕನ್ನಡಿ, ಪ್ರಭಾವಳಿಗಳನ್ನು ಮೆರವಣಿಗೆಯಲ್ಲಿ ಸಾಗಿಸಲಾಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಸಾಽ್ವ ಮಾತಾನಂದಮಯಿ ಅವರ ದಿವ್ಯ ಸಾನಿಧ್ಯದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ, ಸಮಿತಿ ಗೌರವಾಧ್ಯಕ್ಷ ಕುಸುಮೋಧರ ಡಿ.ಶೆಟ್ಟಿ ಚೆಲ್ಲಡ್ಕ, ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್ ಮೊದಲಾದವರು ಚಾಲನೆ ನೀಡಿದರು.
ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಐತಾಳ್ ಲಡ್ಡುಕೋಡಿ, ಜೀರ್ಣೋದ್ಧಾರ ಸಮಿತಿ ಸಂಚಾಲಕ ಸಂಪತ್‌ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು, ಪ್ರಧಾನ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟ್ಟದಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ ದೋಟ, ಜತೆ ಕಾರ್ಯದರ್ಶಿ ಸುದರ್ಶನ್ ಹಟದಡ್ಕ, ಶ್ರೀ ರಕ್ತೇಶ್ವರೀ ಸನ್ನಿಽಯ ಅಧ್ಯಕ್ಷ ವಿಶ್ವನಾಥ ಬಿ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಸಂಜೀವ ಪೂಜಾರಿ ಬಿ.ಸಿ.ರೋಡು, ರಾಧಾಕೃಷ್ಣ ಮಯ್ಯ ಕಯ್ಯೊಟ್ಟು, ಸರಪಾಡಿ ಅಶೋಕ್ ಶೆಟ್ಟಿ, ಸಾಂತಪ್ಪ ಪೂಜಾರಿ ಹಟದಡ್ಕ, ಪುರುಷೋತ್ತಮ ಪೂಜಾರಿ ಮಜಲು, ತಿಲಕ್ ಬಂಗೇರ ಕೆಂಚನಬೆಟ್ಟು, ಸುದೀಪ್‌ಕುಮಾರ್ ಶೆಟ್ಟಿ, ಬಾಲಕೃಷ್ಣ ಆಳ್ವ ಕೊಡಾಜೆ, ರಾಧಾಕೃಷ್ಣ ರೈ ಕೊಟ್ಟುಂಜ, ಪ್ರಕಾಶ್ಚಂದ್ರ ಆಳ್ವ ಪಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಯೋಗೀಶ್ ಶೆಟ್ಟಿ ಆರುಮುಡಿ, ಕುಸುಮಾಕರ ಶೆಟ್ಟಿ ಕುರ್ಯಾಳ, ಹರಿಪ್ರಸಾದ್ ಡೆಚ್ಚಾರು, ಸಂಜೀವ ಪೂಜಾರಿ ತಿಂಗಳಾಡಿ, ಗುರುರಾಜ್ ಕುಂಟೋನಿ, ಪ್ರಶಾಂತ್ ಪೂಜಾರಿ ನೇಲ್ಯಪಲ್ಕೆ, ಬಾಲಕೃಷ್ಣ ಪೂಜಾರಿ ಕೊಟ್ಟುಂಜ, ನಾಗರಾಜ್ ಕುಟ್ಟಿಕಳ, ಯಾದವ ಶೆಟ್ಟಿ ಹಂಡೀರು, ಕಾಂಚಲಾಕ್ಷಿ ತಿಂಗಳಾಡಿ, ದೇವಪ್ಪ ಕುಲಾಲ್, ಅಖಿಲ್ ಶೆಟ್ಟಿ ಕುರ್ಯಾಳ, ವೆಂಕಪ್ಪ ಪೂಜಾರಿ ಮೊದಲಾದವರಿದ್ದರು. ಹುಲಿ ಕುಣಿತ, ಕುಣಿತ ಭಜನೆ, ಚಿಲಿ ಪಿಲಿ ಗೊಂಬೆ ಬಳಗ, ಚೆಂಡೆ ಬಳಗ ಮೆರವಣಿಗೆಯ ಆಕರ್ಷಣೆಯಾಗಿತ್ತು.