ಬಂಟ್ವಾಳ

ಬಂಟ್ವಾಳ ವಕೀಲರ ಸಂಘದ ಕ್ರೀಡಾಕೂಟ

ಕ್ರಿಕೆಟ್ ಆಡಿ ಗಮನ ಸೆಳೆದ ಶಾಸಕ ರಾಜೇಶ್ ನಾಯ್ಕ್

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಬಂಟ್ವಾಳ ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟ ನಡೆಯಿತು. ಅಡ್ವೊಕೇಟ್ಸ್ ಪ್ರೀಮಿಯರ್ ಲೀಗ್ 2022 ಸೀಸನ್ 5 ಎಂಬ ಹೆಸರಿನಲ್ಲಿ ವಕೀಲರ ಸಂಘ (ರಿ ) ಬಂಟ್ವಾಳ ಇದರ ವಾರ್ಷಿಕ ಕ್ರೀಡಾ ಕೂಟ ಪಾಣೆಮಂಗಳೂರಿನ ಶಾರದಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.  ಕ್ರೀಡಾಕೂಟವನ್ನು ನ್ಯಾಯಾಧಿಶರಾದ ಬಾಲಗೋಪಾಲಕೃಷ್ಣ ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.  ಸಂಜೆ ನಡೆದ ಕ್ರಿಕೆಟ್ ಫೈನಲ್ ಪಂದ್ಯಾಟವನ್ನುಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸ್ವತಃ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಸಮಾರೋಪ ಸಭಾರಂಭದಲ್ಲಿ ರಾಜ್ಯ ಸರ್ಕಾರದ ಎಡಿಶನಲ್ ಅಡ್ವೊಕೇಟ್  ಜನರಲ್ ಅರುಣಶ್ಯಾಮ ಬಹುಮಾನ ವಿತರಿಸಿದರು. ನ್ಯಾಯಾಧೀಶರಾದ ರಮ್ಯಾ ಎಚ್.ಆರ್, ಶಿಲ್ಪಾ ಜಿ ತಿಮ್ಮಾಪುರ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ಬಿ ಗಣೇಶಾನಂದ ಸೋಮಯಾಜಿ ವಹಿಸಿದ್ದರು. ಕ್ರೀಡಾ ಕಾರ್ಯದರ್ಶಿ ಸುದರ್ಶನ್ ಕುಮಾರ್ ವಂದಿಸಿದರು. ಗಿರೀಶ್ ಮುಳಿಯಾಲ ಕಾರ್ಯಕ್ರಮ ನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts