www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ರವಿವಾರ ಕ್ಷೇತ್ರಕ್ಕೆ ಅದ್ದೂರಿಯ ಮೆರವಣಿಗೆ ನಡೆಯಿತು. ಮೆರವಣಿಗೆಯು ಕಟೀಲು ಕ್ಷೇತ್ರದಿಂದ ಹೊರಟಿದ್ದು, ಹೊರೆಕಾಣಿಕೆಯ ಜತೆಗೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪ್ರಧಾನ ಕಲಶ, ಪಾಣಿಪೀಠದ ಬೆಳ್ಳಿಯ ಹೊದಿಕೆ, ಉತ್ಸವಮೂರ್ತಿ ಮತ್ತು ಪಲ್ಲಕಿಯನ್ನು ಕ್ಷೇತ್ರಕ್ಕೆ ಸಾಗಿಸಲಾಯಿತು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಽಯ ಬಳಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ರಕ್ತೇಶ್ವರೀ ದೇವಸ್ಥಾನದ ಅರ್ಚಕ ಶ್ರೀವತ್ಸ ಭಟ್, ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಶ್ರೀ ರಕ್ತೇಶ್ವರೀ ಕ್ಷೇತ್ರದ ಅಧ್ಯಕ್ಷ ರಾಜೇಶ್ ಎಲ್.ನಾಯಕ್ ಅವರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಬಿ.ಸಿ.ರೋಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕಗುತ್ತು, ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ, ಹೊರೆಕಾಣಿಕೆ ಸಮಿತಿ ಸಂಚಾಲಕ ಡಾ| ರವಿ ಕಕ್ಯಪದವು, ಸಹಸಂಚಾಲಕ ಪುರುಷೋತ್ತಮ ಕಾಯರ್‌ಪಲ್ಕೆ, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲ್, ವಿವಿಧ ಸಮಿತಿಗಳ ಪ್ರಮುಖರಾದ ಯಶವಂತ ದೇರಾಜೆ, ಪುಷ್ಪರಾಜ್ ಶೆಟ್ಟಿ, ಟಿ.ತಾರಾನಾಥ ಕೊಟ್ಟಾರಿ, ಪುರುಷೋತ್ತಮ್ ಪೂಜಾರಿ ಮಜಲು, ಧನಂಜಯ ಶೆಟ್ಟಿ ನಾಡಬೆಟ್ಟು, ಮೋನಪ್ಪ ಪೂಜಾರಿ , ರಾಧಾಕೃಷ್ಣ ರೈ ಕೊಟ್ಟಾರಿ, ಸಂತೋಷ್ ಶೆಟ್ಟಿ ಪಿ, ಭುವನೇಶ್ ಪಚ್ಚಿನಡ್ಕ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ದಿನೇಶ್ ಶೆಟ್ಟಿ ಬಜ, ಸಂತೋಷ್ ಕುಲಾಲ್, ರಮೇಶ್ ಸಾಲಿಯಾನ್ ಮುಂಬಯಿ, ನಿರಂಜನ್ ಬಾಚಕೆರೆ, ಸುಂದರ ಬಾಚಕೆರೆ, ಶಶಿಧರ ಬಾಚಕೆರೆ, ಗಿರಿನಾಥ ಶರ್ಮ ಬಾಚಕೆರೆ, ಮೋಹಿನಿ ಬಾಚಕೆರೆ, ಶಕುಂತಳಾ ಟೀಚರ್ ಮೊದಲಾದವರು ಪಾಲ್ಗೊಂಡಿದ್ದರು.