www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಕಾರು ನೋಡನೋಡುತ್ತಿದ್ದಂತೆಯೇ ಸುಟ್ಟು ಭಸ್ಮವಾದ ಘಟನೆ ವಿಟ್ಲ ಸಮೀಪ ಕೋಡಪದವು ಸರವು ಎಂಬಲ್ಲಿ ಭಾನುವಾರ ನಡೆದಿದೆ.
ಕೆಲಿಂಜ ನಿವಾಸಿ ಸಿಟ್ರಿನ್ ಪಾಯಸ್ ಎಂಬವರಿಗೆ ಸೇರಿದ ಡಸ್ಟರ್ ಕಾರಿನ ಸರ್ವೀಸ್ ಕಾರ್ಯ ನಿನ್ನೆಯಷ್ಟೇ ನಡೆದಿದ್ದು, ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲ ಕಡೆಗೆ ಅವರು ಭಾನುವಾರ ತೆರಳುತ್ತಿದ್ದರು. ಈ ಸಂದರ್ಭ ಕಾರಿನಲ್ಲಿ ಶಬ್ದ ಕೇಳಿಸಿದೆ. ದಿಢೀರನೆ ಉಂಟಾದ ಶಬ್ದದಿಂದ ಆತಂಕಿತರಾದ ಅವರು, ಕಾರನ್ನು ಬದಿಗೆ ನಿಲ್ಲಿಸಿದ್ದಾರೆ. ಆ ಕ್ಷಣದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿತು. ಕೂಡಲೇ ಅವರು ಕಾರಿನ ಸಮೀಪದಿಂದ ಹೊರಬಂದಿದ್ದಾರೆ. ಯಾವ ಕಾರಣಕ್ಕಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ ಆಂತರಿಕ ಯಂತ್ರದೊಳಗಿನ ಸಮಸ್ಯೆಯೊಂದ ಈ ಅವಘಡ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…