www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಮೊಡಂಕಾಪು ಕಾರ್ಮೆಲ್ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನ ಆಚರಣೆ ನಡೆಯಿತು. ಮಂಗಳೂರು ವಿವಿ, ಲಯನ್ಸ್ ಬಂಟ್ವಾಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಡಾ. ಅಕ್ಕಯ್ಯ ಪದ್ಮಶಾಲಿ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಅವರ ಜೀವನ ಆಧರಿತ ನಾಟಕವನ್ನು ನಯನಾ ಪ್ರದರ್ಶಿಸಿದರು.
ಸಾಧಕರಾದ ಶೋಭಾ ಪೈ, ಮೀನಾಕ್ಷಿ ಆಚಾರ್ಯ ಮತ್ತು ಮಧುರಾ ಅವರನ್ನು ಸನ್ಮಾನಿಸಲಾಯಿತು. ಪ್ರಿನ್ಸಿಪಾಲ್ ಭಗಿನಿ ಡಾ. ಲತಾ ಎ.ಸಿ. ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಧೀರಜ್, ಪ್ರಮುಖರಾದ ಡಾ. ಫಾ. ಐವನ್ ಡಿಸೋಜ, ಭಗಿನಿ ಮರಿಯಪ್ರಿಯಾ ಎ.ಸಿ., ಪಿಯು ಕಾಲೇಜಿನ ಪ್ರಿನ್ಸಿಪಾಲ್ ಭಗಿನಿ ನವೀನಾ, ಲಯನ್ಸ್ ಸದಸ್ಯರು ಇದ್ದರು. ಉಪನ್ಯಾಸಕಿ ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ತೇಜಸ್ವಿ ವಂದಿಸಿದರು.
ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)