www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಬಿರುಗಾಳಿ ಹಾನಿ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪ ನಿಧಿಯಿಂದ ಚೆಕ್ ವಿತರಣೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನಡೆಸಿದರು. ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಗಕಜೆಕಾರ್, ತೆಂಕಕಜೆಕಾರ್, ಕಾವಳಮೂಡೂರು, ಉಳಿ, ಪಿಲಾತಬೆಟ್ಟು, ಇರ್ವತ್ತೂರು,ಸಂಗಬೆಟ್ಟು,ರಾಯಿ ಹಾಗೂ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗಳ ಗ್ರಾಮಗಳ 110 ಜನ ಸಂತ್ರಸ್ತರಿಗೆ 5.93 ಲಕ್ಷ ರೂ ಮೊತ್ತದ ಚೆಕ್ ವಿತರಿಸಲಾಯಿತು.
ಸಂಗಬೆಟ್ಟು ಅಧ್ಯಕ್ಷರಾದ ಸತೀಶ್ ಪೂಜಾರಿ, ರಾಯಿ ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಪಿಲಾತಬೆಟ್ಟು ಅಧ್ಯಕ್ಷರಾದ ಹರ್ಷಿಣಿ ಪುಷ್ಪಾನಂದ, ಉಳಿ ಪಂ.ಅಧ್ಯಕ್ಷರಾದ ಸುರೇಶ್ ಮೈರ, ಕಾವಳಮೂಡೂರು ಪಂ.ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ, ಇರ್ವತ್ತೂರು ಪಂ.ಸದಸ್ಯ ಶುಭಕರ, ಪಂ.ಸದಸ್ಯರಾದ ಶೇಷಗಿರಿ ಪೂಜಾರಿ, ಬಡಗಕಜೆಕಾರು ಪಂ.ಸದಸ್ಯರಾದ ಸತೀಶ್, ಕಂದಾಯ ನಿರೀಕ್ಷಕರಾದ ಸಂತೋಷ್, ವಿಜಯ್. ಆರ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಕುಮಾರ್.ಟಿ.ಸಿ, ವಂದನಾ, ನಿಶ್ಮಿತಾ, ಚೆನ್ನಬಸವ ಅಲ್ಲಗೊಳ, ಆಶಾ ಮೆಹಂದಲೆ, ಸ್ವಾತಿ, ಪ್ರವೀಣ್, ವಿಜೇತ, ಅಶ್ವಿನಿ, ಮತ್ತಿಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.