www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಕರಾವಳಿ ಕರ್ನಾಟಕದ ಪ್ರಪ್ರಥಮ ಎಲ್‌ಇಡಿ ಟಿ.ವಿ. ಉತ್ಪಾದಕ ಕಂಪನಿಯಾದ ಅಪ್ಟೋನಿಕಾ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಉತ್ಪಾದನಾ ಘಟಕವು ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ಆರಂಭಗೊಂಡಿದ್ದು ಕಂಪೆನಿಯ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಮಾರಂಭ ಬಿ.ಸಿ.ರೋಡಿನ ತಲಪಾಡಿಯಲ್ಲಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್‌ನಲ್ಲಿ ಭಾನುವಾರ ಸಂಜೆ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಂಪೆನಿಯ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಪ್ರಧಾನಿಯವರ ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಅಪ್ಟೋನಿಕಾ ಸಂಸ್ಥೆಯ ಟಿವಿಗಳು ಭಾರತದಲ್ಲಿಯೇ ತಯಾರಾಗಿ ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನಮ್ಮಚಿಂತನೆ, ಬುದ್ದಿವಂತಿಕೆ, ಕೌಶಲ್ಯಗಳನ್ನು ಬಳಸಿಕೊಂಡು ಸ್ವದೇಶಿ ವಸ್ತುಗಳನ್ನು ತಯಾರಿಸಿ ವಿಶ್ವಕ್ಕೆ ನೀಡಬೇಕೆನ್ನುವ ಆತ್ಮನಿರ್ಭರ ಭಾರತದ ಯೋಜನೆ ಈ ಮೂಲಕ ಕಾರ್ಯರೂಪಕ್ಕೆ ಬಂದಿದೆ. ಕಂಪೆನಿಯ ಹೆಸರಿನಂತೆ ಎತ್ತರಕ್ಕೆರಲಿ ಎಂದು ಶುಭ ಹಾರೈಸಿದರು. ಕಂಪೆನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಮಹಾಬಲೇಶ್ ಪಿ.ಜಿ. ಮಾತನಾಡಿ ಗ್ರಾಹಕರ ಸಹಕಾರದ ನಿರೀಕ್ಷೆಯಲ್ಲಿ ಟಿ.ವಿ. ಉತ್ಪಾದನೆ ಕಾರ್ಯಕ್ಕೆ ಮುಂದಾಗಿದ್ದೇವೆ, ಗುಣಮಟ್ಟದ ಹಾಗೂ ಕ್ಲಪ್ತ ಸಮಯದ ಸೇವೆಯನ್ನು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು. ಮುಖ್ಯ ಪ್ರಬಂಧಕ ಟಿ. ಮುರಳೀಧರ ರಾವ್, ಸೇಲ್ಸ್ ಎಕ್ಸುಕ್ಟೂಟಿವ್ ರಾಹುಲ್, ಸಂಭ್ರಮ ಎಲೆಕ್ಟ್ರಾನಿಕ್ಸ್‌ನ ಪ್ರವರ್ತಕ ಗಿರೀಶ್ ನಿಟಿಲಾಪುರ, ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಸಿಬ್ಬಂದಿಗಳು, ಅಪ್ಟೋನಿಕಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಜೇಶ್ ಕೊಟ್ಟಾರಿ ಗೋಳ್ತಮಜಲು ಉಪಸ್ಥಿತರಿದ್ದರು.