www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಆರ್ ಐ ಡಿ ಎಫ್ 25 .ಯೋಜನೆಯಡಿ ತಲಾ 16 ಲಕ್ಷ ರೂ.ವೆಚ್ಚದಲ್ಲಿ ನರಿಕೊಂಬು ಗ್ರಾಮದ ಶೇಡಿಗುರಿ, ಅಮ್ಟೂರು ಗ್ರಾಮದ ಕೇಶವ ನಗರ ಹಾಗೂ ಸಜೀಪಮುನ್ನೂರು ಗ್ರಾಮದ ಕಟ್ಲೆಮಾರ್ ನಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶನಿವಾರ ಉದ್ಘಾಟಿಸಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸ್ಥಳದಾನ ಮಾಡಿದವರು, ಕೇಂದ್ರ ನಡೆಸಲು ಸ್ಥಳಾವಾಕಾಶ ನೀಡಿದವರು ಹಾಗೂ ಕೊಡುಗೆಗಳನ್ನು ನೀಡಿದವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಪ್ರಸ್ತಾವನೆಗೈದರು.
ಶೇಡಿಗುರಿಯಲ್ಲಿ ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ವಿನಿತಾ ಪುರುಷೋತ್ತಮ, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ರವಿ ಅಂಚನ್, ನಾರಾಯಣ ಪೂಜಾರಿ, ರಂಜಿತ್ ಕೆದ್ದೇಲು, ಯೋಗೀಶ್ ಶಾಂತಿಲ, ಸವಿತಾ, ಸುಜಾತಾ, ಹೇಮಲತಾ, ಅರುಣ್, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ, ಯುವತಿ ಮಂಡಲದ ಗೀತಾ, ಸುನೀತಾ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಜಯರಾಮ ಪೂಜಾರಿ, ಪುರುಷೋತ್ತಮ ಸಾಲ್ಯಾನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಅಮೃತ್‌ಕುಮಾರ್, ಪಿಡಿಒ ಶಿವು ಬಿರಾದಾರ್, ಶಂಭೂರು ಪ್ರೌಢಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಉಪಸ್ಥಿತರಿದ್ದರು. ಕೇಶವನಗರದಲ್ಲಿ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಪ್ರಭು, ಸದಸ್ಯರಾದ ಎಲಿಯಾಸ್ ಡಿಸೋಜ, ಜಯಂತ ಗೌಡ, ಸುಶ್ಮಾ, ಪಿಡಿಒ ವಿಜಯಶಂಕರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸಾಯಿದಾ, ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು. ಕಟ್ಲೆಮಾರ್‌ನಲ್ಲಿ ಸಜೀಪಮ್ನೂರು ಗ್ರಾ.ಪಂ.ಉಪಾಧ್ಯಕ್ಷೆ ಸಬೀನಾ, ಸದಸ್ಯರಾದ ಸಿದ್ದೀಕ್, ಜಮಾಲುದ್ದೀನ್, ಪ್ರವೀಣ್ ಗಟ್ಟಿ, ಪ್ರಮುಖರಾದ ಇದಿನಬ್ಬ ನಂದಾವರ, ಉಪಾಧ್ಯಕ್ಷ ಪಿಡಿಒ ಮೊಹಮ್ಮದ್, ಪಿಡಿಒ ಮೊಹಮ್ಮದ್, ಆರೋಗ್ಯ ಇಲಾಖೆಯ ಸುಮನಾ ಕ್ರಾಸ್ತಾ ಉಪಸ್ಥಿತರಿದ್ದರು. ಸಹಾಯಕ ಸಿಡಿಪಿಒ ಶೀಲಾವತಿ, ಸಂರಕ್ಷಣಾಽಕಾರಿ ಭಾರತಿ ಬಿ.ಕುಂದರ್, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕತೆಯರು ಸಹಕರಿಸಿದರು.