www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಶಿವರಾತ್ರಿ ಹಿನ್ನೆಲೆಯಲ್ಲಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಕಾರಿಂಜ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಶಿವಮಾಲಾಧಾರಣೆ ವಿವಿಧ ದೇವಸ್ಥಾನದಲ್ಲಿ ನಸುಕಿನ ವೇಳೆ ಫೆ.27ರಂದು ನಡೆಯಲಿದೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ಹಲವು ಹಂತಗಳಲ್ಲಿ ಕಾರಿಂಜ ಕ್ಷೇತ್ರ ಉಳಿಸಿ ಅಭಿಯಾನ ನಡೆಸಲಾಗಿದ್ದು, ನಾಲ್ಕನೇ ಹಂತದ ಜನಾಂದೋಲನ ಅಂಗವಾಗಿ ಶಿವಮಾಲಾಧಾರಣೆ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, 27ರಂದು ವಿವಿಧ ದೇವಸ್ಥಾನಗಳಲ್ಲಿ ಶಿವಮಾಲಾಧಾರಣೆ ನಡೆಯಲಿದ್ದು, ಮಾ.1ರ ಶಿವರಾತ್ರಿಯಂದು ಕಾರಿಂಜಕ್ಕೆ ತೆರಳಲಾಗುವುದು. ಹಲವು ನಿಯಮಗಳೊಂದಿಗೆ ವ್ರತಾಚರಣೆಯನ್ನು ಮಾಡಲಾಗುವುದು ಎಂದರು. ಫೆ.27 ರಂದು ಪೂರ್ವಾಹ್ನ 6. ಗಂಟೆಯ ಒಳಗೆ ರುದ್ರಾಕ್ಷಿ ಮಾಲಾಧಾರಣೆ ಮಾ.1ರ ಶಿವರಾತ್ರಿಯ ದಿವಸ ಅಪರಾಹ್ನ 4 ಗಂಟೆಗೆ ಮಾಲಾಧಾರಿಗಳಿಂದ ಮತ್ತು ಶಿವಭಕ್ತ ರಿಂದ ಸಂಕೀರ್ತನೆ ಯಾತ್ರೆ ನಡೆಯಲಿದೆ. ಮಾರ್ಚ್ 2 ರಂದು ಬೆಳಿಗ್ಗೆ ಪೂಜೆಯ ನಂತರ ಮಾಲಾವಿಸರ್ಜನೆ ನಡೆಯಲಿದೆ ಎಂದರು. ಕೇಸರಿ ಲುಂಗಿ ಧರಿಸುವುದು, ಹಣೆಗೆ ಭಸ್ಮಧಾರಣೆ, ಪ್ರತಿದಿನ ಸೂರ್ಯೋದಯ ಕ್ಕಿಂತ ಮುನ್ನ ಮತ್ತು ಸಂಜೆ ಸೂರ್ಯಾಸ್ತದ ಸಮಯ ಶುಚಿಭೂತರಾಗಿ ಶೃದ್ದಾಭಕ್ತಿಯಿಂದ 108 ಬಾರಿ ಓಂ.ನಮಃ ಶಿವಾಯ ಮಂತ್ರ ಜಪ, ಬ್ರಹ್ಮಚರ್ಯ ಪಾಲನೆ ಸಾತ್ವಿಕ ಆಹಾರ, ಬೆಳಿಗ್ಗೆ ರಾತ್ರಿ ಉಪಹಾರ, ಮಧ್ಯಾಹ್ನ ಒಂದು ಹೊತ್ತಿನ ಊಟ ಸ್ವೀಕರಿಸಿ ಅದರ ಪಾವಿತ್ರ್ಯತೆ ಯನ್ನು ಕಟ್ಟುನಿಟ್ಟಾಗಿ ಉಳಿಸಿಕೊಳ್ಳಲಾಗುವುದು ಎಂದರು. ಸಂಘಟನೆಯ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ, ಜಗದೀಶ ನೆತ್ತರಕೆರೆ, ಪ್ರಶಾಂತ್ ಕೆಂಪುಗುಡ್ಡೆ, ರಾಜೇಶ್ ಬೊಳ್ಳುಕಲ್ಲು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.