www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಬೆಂಜನಪದವಿನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಬಿ.ಮೂಡದ ಕ್ಲಸ್ಟರ್ ಮಟ್ಟದ ಎಸ್.ಡಿ.ಎಂ.ಸಿ. ತರಬೇತಿ ಕಾರ್ಯಾಗಾರ ಬುಧವಾರ ನಡೆಯಿತು.
ಅಮ್ಮುಂಜೆ ಪಿಡಿಒ ನಯನಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸರ್ಕಾರಿ ಶಾಲೆಯ ಅಭಿವೃದ್ಧಿ ಗಮನಿಸಿ ಪೋಷಕರನ್ನು ಸೆಳೆಯುವ ಕಾರ್ಯ ಆಗಬೇಕಿದೆ. ಹೊಸ ಸಮಾಜದ ನಿರ್ಮಾಣದ ಜವಾಬ್ದಾರಿ ಶಿಕ್ಷಕರೊಂದಿಗೆ ನಿಮಗೂ ಇದೆ ಎಂದರು.
ಅಮ್ಮುಂಜೆ ಗ್ರಾಪಂ ಅಧ್ಯಕ್ಷ ವಾಮನ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಅಭಿವೃದ್ಧಿಯ ಚಟುವಟಿಕೆ ಕುರಿತು ವಿವರಿಸಿದರು.
ಬಿ.ಮೂಡ ಕ್ಲಸ್ಟರ್ ಮಟ್ಟದ ಐದು ಪ್ರಾಥಮಿಕ ಶಾಲೆ, ನಾಲ್ಕು ಹೈಸ್ಕೂಲ್ ಮಟ್ಟದಲ್ಲಿ ನಡೆದ ಸಭೆಯ ಕುರಿತು ಕ್ಲಸ್ಟರ್ ಮಟ್ಟದ ಅಧಿಕಾರಿ ಉಷಾ ಸುವರ್ಣ ವಿವರಿಸಿದರು.
ಕಾರ್ಯಕ್ರಮದಲ್ಲಿ ಅಮ್ಮುಂಜೆ ಪಿಡಿಒ ನಯನಾ, ಸದಸ್ಯ ರಾಧಾಕೃಷ್ಣ ತಂತ್ರಿ, ದಾನಿ ಉಮೇಶ್ ಸಾಲಿಯಾನ್, ಉಪಪ್ರಾಂಶುಪಾಲ ಅನಂತಪದ್ಮನಾಭ, ಪೊಳಲಿ ಹೈಸ್ಕೂಲ್ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀದೇವಿ ಸ್ವಾಗತಿಸಿದರು. ಇದೇ ವೇಳೆ ಪಿಡಿಒ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ದೇವದಾಸ್ ವಂದಿಸಿದರು.