ಬಂಟ್ವಾಳ

ಸಜಿಪನಡು ಬ್ರಹ್ಮಕಲಶೋತ್ಸವ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ, ಧಾರ್ಮಿಕ ಸಭೆಯಲ್ಲಿ ಭಾಗಿ

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಗಳಿಂದ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ಮಹತ್ವವಿದೆ. ಎಲ್ಲ ಧರ್ಮಗಳಲ್ಲೂ ನಾಗಾರಾಧನೆಗೆ ಪ್ರಾಶಸ್ತ್ಯವಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಅವರು ‌ಮಾತನಾಡಿದರು. ಜೀವನದಲ್ಲಿ ಶಿಸ್ತು ಇದ್ದರೆ, ನಾವು ಮಾಡುವ ಎಲ್ಲ ಕೆಲಸಗಳಿಗೆ ರಕ್ಷಣೆ ದೊರಕುತ್ತದೆ ಎಂದವರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ದೈವಸ್ಥಾನ ಆದರ್ಶ ಆಗಬೇಕು, ಜೀವನವೆಂದರೆ ಋತು ಬದಲಾವಣೆಯಾದಂತೆ, ಸಂದರ್ಭಗಳನ್ನು ಎದುರಿಸಬೇಕು. ಸಂಕಷ್ಟ, ಸಂತಸಗಳು, ಪರಿವರ್ತನೆಗಳನ್ನು ಎದುರಿಸಬೇಕು ಎಂದರು. 2400 ಕೋಟಿ ರೂ ಉಳಿತಾಯವನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರು ಉಳಿತಾಯ ಮಾಡುವ ಕೆಲಸ ಮಾಡಿದ್ದಾರೆ ಎಂದರು

ಜಾಹೀರಾತು

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಮೂಲಕ ಪರಸ್ಪರ ಜನರನ್ನು ಒಗ್ಗೂಡಿಸುವ ಚಿಂತನೆ ಮೂಡಿಸಬೇಕು. ಸಮಾಜದ ಪ್ರೀತಿ ವಿಶ್ವಾಸ ಮೂಡಿಸುವಂತೆ ಮಾಡುತ್ತದೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಟೀಲು ದೇವಸ್ಥಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ,  ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ  ಕೆ.ರವೀಂದ್ರ ಕಂಬಳಿ, ಕೊಲ್ಲೂರು ಕ್ಷೇತ್ರದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಶ್ರೀ ಕ್ಷೇತ್ರ ನಂದಾವರ ಮಾಜಿ ಆಡಳಿತ ಮೊಕ್ತೇಸರ ಎ.ಸಿ.ಭಂಡಾರಿ, ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಉದ್ಯಮಿ ಶ್ರೀಕಾಂತ ಶೆಟ್ಟಿ ಸಂಕೇಶ, ಉದ್ಯಮಿ ದುರ್ಗಾಪ್ರಸಾಧ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಜವ,  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಆಳ್ವ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಆರಾಧನಾ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಪ್ರಮುಖರಾದ ಸುರೇಶ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಕಾರಂತ ಕಾನ್ಸಾಲೆ ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಪುಣ್ಕೆಮಜಲು ಅಧ್ಯಕ್ಷತೆ ವಹಿಸಿದ್ದರು.ಸಮಿತಿ ಉಪಾಧ್ಯಕ್ಷ ಅಶೋಕ ಪಕ್ಕಳ ಸ್ವಾಗತಿಸಿದರು. ಶಿವಪ್ರಸಾದ್ ಶೆಟ್ಟಿ ಮತ್ತು ಪ್ರಮೋದ್ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ವಂದಿಸಿದರು.

ಸನ್ಮಾನ, ಗೌರವ: ಈ ಸಂದರ್ಭ ಸ್ಕಂದ ಪ್ರಶಸ್ತಿಯನ್ನು ಪುಣ್ಕೆಮಜಲು ಲೀಲಾವತಿ ಎಂ. ಭಂಡಾರಿ, ಅವರ ಪುತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಹೇಮಲತಾ ಭಂಡಾರಿ ದಂಪತಿಗೆ ನೀಡಿ ಗೌರವಿಸಲಾಯಿತು.ಕಾಂಕ್ರೀಟ್ ರಸ್ತೆ, ತಡೆಗೋಡೆ ರಸ್ತೆ ನಿರ್ಮಾಣ ಕ್ಕೆ ದೇಣಿಗೆ ನೀಡಿ ಸಹಕರಿಸಿದ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರನ್ನು ಗೌರವಿಸಲಾಯಿತು.ದಾನಿಗಳಾದ ದೇವದಾಸ್ ಆಳ್ವ ಕುಡ್ಕಾಜೆ, ಶಶಿಪ್ರಭಾ ಆಳ್ವ, ಅಶೋಕ್ ಭಂಡಾರಿ ಪಟೇಲಮನೆ, ಚೇಳೂರು, ಧರ್ಮಸ್ಥಳದ  ಕೃಷ್ಣಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ನಿತ್ಯಸೇವೆ ನಡೆಸುತ್ತಿರುವ ಗಂಗಾಧರ ಪಾದೆ ಅವರಿಗೆ ನಿತ್ಯಸೇವಕ ಎಂದು ಗುರುತಿಸಲಾಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.