www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಗಲಾಟೆ ಮಾಡಿಕೊಂಡು ಬಂಟ್ವಾಳ ಬೈಪಾಸ್ ನಲ್ಲಿ ನಿಂತಿದ್ದ ತಂಡವೊಂದಕ್ಕೆ ಸಮಾಧಾನಪಡಿಸಲು ಹೋದ ಇಬ್ಬರ ಮೇಲೆ ಚೂರಿಯಿಂದ ಇರಿದ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರನ್ನು ಶುಕ್ರವಾರ ಬಂಧಿಸಿದೆ. ಘಟನೆ ಬುಧವಾರ ರಾತ್ರಿ ನಡೆದಿದ್ದು, ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸ್ ಉಪಾಧೀಕ್ಷಕ ಪ್ರತಾಪ ಸಿಂಗ್ ತೋರಾಟ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರಚಿಸಿದ್ದು ಶುಕ್ರವಾರ ಆರೋಪಿಗಳಾದ ಕಾವಳಮುಡೂರಿನ ಪುರುಷೋತ್ತಮ (27), ಮತ್ತು ಬಿ.ಕಸ್ಬಾ ಗ್ರಾಮದ ಧನಂಜಯ ಯಾನೆ ಧನುಷ (19)ರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಸಚಿನ್ ಅರಬಿ ಗುಡ್ಡೆ ಮತ್ತು ಸುಜಿತ್ ಪತ್ತೆಗೆ ಬಂಟ್ವಾಳ ನಗರ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿದೆ.
ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ನಿವಾಸಿ ದಯಾನಂದ ಹಾಗೂ ಕಿಶೋರ್ ಅವರು ಚೂರಿ ಇರಿತಕ್ಕೊಳಗಾಗಿದ್ದು,ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬಂಟ್ವಾಳ ಬೈಪಾಸ್ ನ ಕಟ್ಟಡವೊಂದರ ಕೆಳಭಾಗದಲ್ಲಿರುವ ಹೋಟೆಲ್ ಮುಂದೆ ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಸುಜಿತ್, ಸಚಿನ್, ಧನು ಹಾಗೂ ಪುರುಷೋತ್ತಮ್ ಯಾವುದೇ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು, ಈ ಸಂದರ್ಭ ಅವರನ್ನು ಸಮಾಧಾನ ಪಡಿಸಿದಾಗ ಸಿಟ್ಟುಗೊಂಡ ಸುಜಿತ್, ಆತನಲ್ಲಿದ್ದ ಚೂರಿಯಿಂದ ಏಕಾಏಕಿ ಹೊಟ್ಟೆಗೆ ಇರಿದಿದ್ದಾನೆ. ಇದೇ ವೇಳೆ, ಬಿಡಿಸಲು ಬಂದ ಕಿಶೋರ್ ಎಂಬಾತನಿಗೂ ಸುಜಿತ್ ಅದೇ ಚೂರಿಯಿಂದ ಬೆನ್ನಿಗೆ ಇರಿದಿದ್ದು,ಸುಜಿತನ ಜೊತೆಗಿದ್ದ ಸಚಿನ, ಧನು ಮತ್ತು ಪುರುಷೋತ್ತಮ್ ರವರು ಸುಜಿತನ ಬೆಂಬಲಕ್ಕೆ ನಿಂತಿದ್ದಾಗಿ ಆಪಾದಿಸಲಾಗಿದೆ.ತಕರಾರು ನಡೆಯುವ ಸಮಯ ಬಿಡಿಸಲು ಹೋಗಿದ್ದು, ಆ ಸಮಯ ಸುಜಿತನಿಗೆ ಯಾರೋ ಬಾಟ್ಲಿಯಿಂದ ಹೊಡೆದಿದ್ದು, ಅವನಿಗೆ ದಯಾನಂದನೇ ಬಾಟ್ಲಿಯಿಂದ ಹೊಡೆದಿದ್ದು ಎಂಬ ಅನುಮಾನದಿಂದ ಚೂರಿಯಿಂದ ಇರಿದು ಈ ರೀತಿ ಕೃತ್ಯವೆಸಗಿದ್ದಾಗಿ ದೂರು ದಾಖಲಾಗಿತ್ತು.