www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ವೀರಕಂಭ ಮಜಿಯಲ್ಲಿರುವ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಮಜಿ ಶಾಲೆಯಲ್ಲಿ ಸಂಸಾರ ಜೋಡುಮಾರ್ಗ ತಂಡದಿಂದ ಆರೋಗ್ಯ ಅರಿವಿನ ಕುರಿತು ನಾಟಕ ಮಂಗಳವಾರ ನಡೆಯಿತು. ವೀರಕಂಬ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಸಹಯೋಗದಲ್ಲಿ ಸಂಸಾರ ಕಲಾವಿದರು ಜೋಡುಮಾರ್ಗ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್ ಕೆ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸಾರ ಜೋಡುಮಾರ್ಗ ತಂಡದ ಕಲಾವಿದರಾದ ಪತ್ರಕರ್ತ ಮೌನೇಶ್ ವಿಶ್ವಕರ್ಮ, ಭವಾನಿ, ಅಶೋಕ್, ಪತ್ರಕರ್ತ ವಿಷ್ಣುಗುಪ್ತ ಪುಣಚ, ಪೃಥ್ವಿರಾಜ್ ಕರೋನದ ಮುನ್ನೆಚ್ಚರಿಕೆ ಕ್ರಮಗಳು, ಕ್ಷಯರೋಗದ ಲಕ್ಷಣಗಳು, ಗಭಿ೯ಣಿಯರ ಆರೋಗ್ಯ, ತಾಯಿಕಾರ್ಡ್ , ಸಾಂಕ್ರಾಮಿಕ ರೋಗಗಳು, ಕಿವುಡುತನ ಮುಂತಾದ ಕುರಿತು ನಾಟಕ ಪ್ರದರ್ಶಿಸಿದರು. ಮಜಿ ಶಾಲೆಗೆ ಕಳೆದ ಐದು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ನೀಡುತ್ತಿರುವ ಮೆಲ್ಕಾರ್ ನ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲೀಕರಾದ
ಮಹಮ್ಮದ್ ಶರೀಫ್ ದಂಪತಿ ಮಗಳ ಹುಟ್ಟಿದ ಹಬ್ಬವನ್ನು ಶಾಲಾ ಮಕ್ಕಳೊಂದಿಗೆ ಆಚರಿಸಿದರು. ಕಾರ್ಯಕ್ರಮದಲ್ಲಿ ಕಲ್ಲಡ್ಕ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಮೆಟಿಲ್ಡಾ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಕುಸುಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಇಂದಿರಾ ನಾಯ್ಕ ,ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ಜ್ಯೋತಿ, ಚಂದ್ರಾವತಿ ,ದೀಪ ,ಸುಶೀಲ, ಕಮಿನಿಟಿ ಆರೋಗ್ಯ ಅಧಿಕಾರಿ ಸಂತೋಷ್, ಮೊದಲಾದವರು ಉಪಸ್ಥಿತರಿದ್ದರು.ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.