www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಜೆಡಿಎಸ್ ಪಕ್ಷದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಹೆಚ್ಚಳ ಅಗತ್ಯ ಎಂದು ಬಂಟ್ವಾಳದ ಲಯನ್ಸ್ ಕ್ಲಬ್ ನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪಕ್ಷದ ಮುಸ್ಲಿಂ ಪ್ರಮುಖರ ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞ, ದೇವೇಗೌಡ ಕಾಲದಲ್ಲಿ ಅಲ್ಪಸಂಖ್ಯಾತ ನಾಯಕರನ್ನು ಬೆಳೆಸಿದ್ದು ಬಿಟ್ಟರೆ, ಅವಕಾಶಗಳು ದೊರೆತದ್ದು ಕಡಿಮೆ. ಈ ನಿಟ್ಟಿನಲ್ಲಿ ಸಂಘಟನೆ ಅಗತ್ಯ ಎಂದರು.
ರಾಜ್ಯ ಮಾಜಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಮೊಹಮ್ಮದ್ ಶಫಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಖಲೀಲ್ ಉಳ್ಳಾಲ, ಜಬ್ಬಾರ್ ಉಳ್ಳಾಲ, ಬಶೀರ್ ಉಳ್ಳಾಲ, ಕುಪ್ಪೆಪದವು ಗ್ರಾ.ಪಂ.ಅಧ್ಯಕ್ಷ ಡಿ.ಪಿ.ಅಮ್ಮಬ್ಬ, ಗ್ರಾ.ಪಂ.ಸದಸ್ಯ ರಿಯಾಜ್, ಹಿರಿಯ ಮುಖಂಡ ಅಶ್ರಫ್ ಕೊಝಿಕಾನ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಮುಖಂಡರಾದ ಹೈದರ್ ಪರ್ತಿಪ್ಪಾಡಿ, ಅಝೀಝ್ ಮಲಾರ್, ಇಕ್ಬಾಲ್ ಮುಲ್ಕಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಕಲ್ಲೇಗ ಮಾತನಾಡಿದರು. ಪ್ರಮುಖರಾದ ಲತೀಫ್ ವಳಚ್ಚಿಲ್, ಅಬೂಬಕ್ಕರ್ ಅಮ್ಮುಂಜೆ ಮೊದಲಾದವರಿದ್ದರು. ಬಂಟ್ವಾಳ ಜೆಡಿಎಸ್ ಮುಂದಾಳು ಹಾರೂನ್ ರಶೀದ್ ಸ್ವಾಗತಿಸಿದರು. ಯುವ ಜನತಾದಳ ಮುಖಂಡ ಸವಾಝ್ ಬಂಟ್ವಾಳ ನಿರ್ವಹಿಸಿದರು