www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ 14ನೇ ಸಿದ್ಧಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ ಸಿದ್ಧಕಟ್ಟೆಯ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ಶುಕ್ರವಾರ 14ನೇ ಜನವರಿಯಂದು ನಡೆಯಲಿದೆ ಎಂದು ಬಂಟ್ವಾಳದ ಬ್ಯಾಂಕಿನ ಕೇಂದ್ರಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುವರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪಪ್ರಜ್ವಲನೆ ಮತ್ತು ಆಶೀರ್ವಚನ ಮಾಡುವರು. ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ ನ ಧರ್ಮಗುರು ರೆ.ಫಾ.ಡೇನಿಯಲ್ ಡಿಸೋಜ, ಶ್ರೀ ಕ್ಷೇತ್ರ ಪೂಂಜದ ಧರ್ಮದರ್ಶಿ ಕೃಷ್ಣಪ್ರಸಾದ್ ಆಸ್ರಣ್ಣ, ಸಿದ್ಧಕಟ್ಟೆ ಮಸೀದಿಯ ಧರ್ಮಗುರು ಗೌಸ್ ಮೊಯುದ್ದೀನ್ ಫೈಜಿ, ಸಂಗಬೆಟ್ಟು ವೀರಭದ್ರೇಶ್ವರ ದೇವಸ್ಥಾನದ ಚಂದ್ರಹಾಸ ಗುರಿಕಾರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸುವರು. ಸಚಿವ ಎಸ್.ಅಂಗಾರ ಭದ್ರತಾ ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಕಂಪ್ಯೂಟರ್ ಅನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇಫ್ ಲಾಕರ್ ಅನ್ನು ಉದ್ಘಾಟಿಸುವರು ಹಾಗೂ ಮಾಜಿ ಸಚಿವ ರಮಾನಾಥ ರೈ ಸ್ವಸಹಾಯಗಳ ಗುರುತಿಸುವಿಕೆಯನ್ನು ನೆರವೇರಿಸುವರು. ಠೇವಣಿ ಪತ್ರವನ್ನು ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಕುಮಾರ್, ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ಸುಜಾತಾ ಆರ್. ಪೂಜಾರಿ, ಸಂಗಬೆಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಪೂಜಾರಿ, ಸಿದ್ಧಕಟ್ಟೆ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಕುಕ್ಕಿಪ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ಎಸ್. ಕುಲಾಲ್, ಸಂಗಬೆಟ್ಟು ಗ್ರಾಪಂ ಉಪಾಧ್ಯಕ್ಷ ವಿಮಲಾ ಮೋಹನ್, ಉಪ್ಪಿನಂಗಡಿ ಉದ್ಯಮಿ ರಾಮಣ್ಣ ಮೂಲ್ಯ, ಕಟ್ಟಡ ಮಾಲೀಕ ದುರ್ಗಾದಾಸ್, ಕುಲಾಲ ಸುಧಾರಕ ಸಂಘ ಸಿದ್ಧಕಟ್ಟೆ ಅಧ್ಯಕ್ಷ ಸುರೇಶ್ ಕುಲಾಲ್ ಉಪಸ್ಥಿತರಿರುವರು ಎಂದರು.
ಪ್ರಸ್ತುತ ಸಂಘ ಶೇ.15 ಡಿವಿಡೆಂಟ್ ಅನ್ನು ಸದಸ್ಯರಿಗೆ ನೀಡಿದ್ದು, 2.06 ಕೋಟಿ ರೂ ಲಾಭ ಗಳಿಸಿದೆ. 153.59 ಕೋಟಿ ರೂ ಠೇವಣಿ ಇದ್ದು, 124.59 ಕೋಟಿ ರೂ ಸಾಲ ನೀಡಲಾಗಿದೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಪದ್ಮನಾಭ ವಿ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ನಿರ್ದೇಶಕರಾದ ವಿಶ್ವನಾಥ ಕೆ.ಬಿ, ರಮೇಶ್ ಸಾಲ್ಯಾನ್, ಅರುಣ್ ಕುಮಾರ್ ಕೆ, ಬಿ.ರಮೇಶ್ ಸಾಲ್ಯಾನ್, ನಾಗೇಶ್ ಬಿ, ಎಂ.ವಾಮನ ಟೈಲರ್, ಸುರೇಶ್ ಎನ್, ಸತೀಶ್, ವಿ.ವಿಜಯಕುಮಾರ್, ಜಯಂತಿ, ವಿದ್ಯಾ, ಜನಾರ್ದನ ಬೊಂಡಾಲ, ಜಗನ್ನಿವಾಸ ಗೌಡ, ಎಂ.ಕೆ.ಗಣೇಶ ಸಮಗಾರ, ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.