ಬಂಟ್ವಾಳ: ಇಲ್ಲಿನ ಕಲ್ಲಡ್ಕ ಸಮೀಪ ಅಮ್ಟೂರಿನ ಶ್ರೀಕೃಷ್ಣ ಮಂದಿರದ 22ನೇ ವಾರ್ಷಿಕೋತ್ಸವ ಮಂದಿರದ ಸಭಾಂಗಣದಲ್ಲಿ ಶ್ರೀ ಕೃಷ್ಣ ಮಂದಿರ, ನವಜ್ಯೋತಿ ಮಿತ್ರಮಂಡಳಿ ಹಾಗೂ ಜ್ಯೋತಿ ಮಹಿಳಾ ಮಂಡಲ ಆಶ್ರಯದಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ಸಭಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಹರಿದ್ವಾರದ ತಪೋನಿಧಿ ನಾಗಾಸಾಧು ಬಾಬಾ ಶ್ರೀ ವಿಠಲಗಿರಿ ಮಹಾರಾಜ್ ಮಾತನಾಡಿ, ಸಂಘಟನೆ ಎತ್ತರಕ್ಕೆ ಬೆಳೆಯುತ್ತದೆ ಎಂದು ಹಾರೈಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಮಕ್ಕಳ ಕೈಯಲ್ಲಿರುವ ಮೊಬೈಲ್ ಕುರಿತು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಸಲಹೆ ನೀಡಿದರು. ನಿವೃತ್ತ ಯೋಧ ಶ್ರೀನಿವಾಸ ಶೆಟ್ಟಿ ಬಾಳಿಕೆ ಮತ್ತು ನೋಣಯ್ಯ ಪೂಜಾರಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭಾರತೀಯ ಸೇನೆಯಲ್ಲಿ 24ವರ್ಷ ಸೇವೆ ಸಲ್ಲಿಸಿ ಕಂಪೆನಿ ಹವಾಲ್ದಾರ್ ಮೇಜರ್ ಆಗಿದ್ದ ಇತ್ತೀಚೆಗೆ ನಿವೃತಿ ಹೊಂದಿರುವ ಭಾಸ್ಕರ ಅಮ್ಟೂರು, ಜೂಡೋ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿರುವ ನಿಶಿತ್ ಪೂಜಾರಿ ಹಾಗೂ ಮಂದಿರಕ್ಕೆ ಯು.ಪಿ.ಎಸ್ ಕೊಡುಗೆ ನೀಡಿದ ಕುಸುಮ ಎಸ್.ಡಿ. ಬಟ್ಟಹಿತ್ಲು ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಸಂದೇಶ್ ಶೆಟ್ಟಿ, ಚೌಟ ಇಂಡೇನ್ ಗ್ಯಾಸ್ ಡಿಸ್ಟ್ರಿಬೂಟರ್‍ಸ್ ಮಾಲಕರು, ಉದ್ಯಮಿ ಬಿ. ಜಗನ್ನಾಥ ಚೌಟ ಬದಿಗುಡ್ಡೆ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ನಂದಗೋಕುಲ ಮಹಾಬಲ ಶೆಟ್ಟಿ, ಗೋಳ್ತಮಜಲು ಗ್ರಾಪಂ ಪಿಡಿಒ ವಿಜಯಶಂಕರ ಆಳ್ವ, ಮಂದಿರ ಉಪಾಧ್ಯಕ್ಷ ಕೌಶಲ್ ಶೆಟ್ಟಿ, ಲೆಕ್ಕಪರಿಶೋಧಕ ಶಂಕರ್ ಅಂಚನ್ ಪೊಯ್ಯಕಂಡ, ಗೌರವಾಧ್ಯಕ್ಷರಾದ ಶಂಕರನಾರಾಯಣ ಐತಾಳ್ ಮತ್ತಿತರರು ಇದ್ದರು. ಅನಂತನಾರಾಯಣ ಐತಾಳ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಂದಿರದ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಸ್ವಾಗತಿಸಿದರು. ಮಂದಿರದ ಅಧ್ಯಕ್ಷ ರಮೇಶ್ ಕರಿಂಗಾಣ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿಠಲ್ ನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ, ನಂತರ ಸಂಜೆ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ಭಗವತೀ ಮಹಾತ್ಮೆ ಯಕ್ಷಗಾನ ನಡೆಯಿತು.