ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಮಂಗಳೂರು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾಗಿರುವ ಬಿ.ಸಿ.ರೋಡ್ ಕೈಕುಂಜೆ ನಿವಾಸಿ ಧೀರಜ್ ಹೆಬ್ರಿ ಅವರು ಮಂಡಿಸಿದ ಕಲರ್ ಬೇಸ್‌ಡ್ ಕ್ಲಾಸ್ಸಿಫಿಕೇಷನ್ ಆಫ್ ಫುಡ್ ಗ್ರೈನ್ ವೆರೈಟೀಸ್ ಯೂಸಿಂಗ್ ಆರ್ಟಿಫಿಷಿಯಲ್ ನ್ಯೂರಲ್ ನೆಟ್‌ವರ್ಕ್ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ನೀಡಿದೆ. ಧೀರಜ್ ಅವರು ಬಂಟ್ವಾಳದ ನಿವೃತ್ತ ರೈಲ್ವೆ ನಿಲ್ದಾಣಾಧಿಕಾರಿ ಎಚ್. ರವಿಶಂಕರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ ಅವರ ಪುತ್ರ. ಬಂಟ್ವಾಳ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿಯಾಗಿರುವ ಅವರು ಜೋಡುಮಾರ್ಗ ಜೇಸಿಯ ಸಕ್ರಿಯ ಸದಸ್ಯರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)