ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಭಾನುವಾರ ಸಂಪನ್ನಗೊಂಡವು. ಬೆಳಗ್ಗೆ 10.09ರ ಕುಂಭ ಲಗ್ನದಲ್ಲಿ ಅಷ್ಟೋತ್ತರ ಶತನಾಳಿಕೇರ ಶ್ರೀ ಮಹಾಗಣಪತಿ ಯಾಗ, ಶ್ರೀ ದೇವರಿಗೆ ಪಂಚವಿಂಶತಿ ದ್ರವ್ಯಾತ್ಮ್ಕ ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಿತು. ವೇ.ಮೂ.ಮುನಿಯೂರು ಕುಮಾರಸುಬ್ರಹ್ಮಣ್ಯ ಭಟ್ಟರ ದಿವ್ಯಹಸ್ತದಿಂದ ಮಾದಕಟ್ಟೆ ಈಶ್ವರ ಭಟ್ಟರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಆಡಳಿತ ಮೊಕ್ತೇಸರ ಜಯರಾಮ ಹೊಳ್ಳ ನಾಗ್ತಿಮಾರ್, ವಿವಿಧ ಸಮಿತಿಗಳ ಪ್ರಮುಖರಾದ ಜನಾರ್ದನ ಕುಲಾಲ್, ಬೊಂಡಾಲ ವಿನೋದ್ ಕುಮಾರ್ ಶೆಟ್ಟಿ, ನಾಗೇಶ್ ಕಲ್ಲಡ್ಕ, ನಾಗೇಶ್ ಶೆಟ್ಟಿ ಬೊಂಡಾಲ, ದಿನೇಶ್ ಅಮ್ಟೂರು, ರಾಜಾರಾಮ ಐತಾಳ, ವಜ್ರನಾಥ ಕಲ್ಲಡ್ಕ, ಶಂಕರನಾರಾಯಣ ಐತಾಳ್, ದಯಾನಂದ ಕುಮಾರ್ ಬೊಂಡಾಲ ಸಹಿತ ವಿವಿಧ ಸಮಿತಿಗಳ ಸದಸ್ಯರು, ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ವಿವಿಧ ಗಣ್ಯರು ಭೇಟಿ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪುತ್ತೂರಿನ ಉದ್ಯಮಿ ಸಂಜೀವ ಆಳ್ವ, ಕೂರಿಯಾಳ ದೇವಸ್ಥಾನದ ಸಮಿತಿ ಅಧ್ಯಕ್ಷ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜಾ ಬಿ.ಎಸ್., ಉದ್ಯಮಿ ಸುಧಾಕರ ಅಚಾರ್ಯ ಮಾರ್ನಬೈಲು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಶ್ರೀನಿವಾಸ ಪೂಜಾರಿ ಮೆಲ್ಕಾರ್ ವಂದಿಸಿದರು. ನಿತೀಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.