ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಕಲ್ಲಡ್ಕದಿಂದ ಬೊಂಡಾಲದವರೆಗೆ ಹೊರೆಕಾಣಿಕೆ ಮೆರವಣಿಗೆ ಮೂಲಕ ಉತ್ಸವಾದಿಗಳಿಗೆ ಚಾಲನೆ ದೊರಕಿತು ಬಳಿಕ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ಬುಧವಾರ ಸಂಜೆ ನಡೆದರೆ, ಗುರುವಾರ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ದಲ್ಲಿ ಭಜನಾ ಸಂಕೀರ್ತನೆ ಕಾರ್ಯಕ್ರಮಕ್ಕೆ ಭಜಕ ಡೊಂಬಯ್ಯ ಟೈಲರ್ ಚಾಲನೆ ನೀಡಿದರು. ಡಿ.26ರಂದು ಬ್ರಹ್ಮಕಲಶಾಭಿಷೇಕ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ 9, ಸಂಜೆ 6ರಿಂದ 9ರವರೆಗೆ ಭಜನಾ ಸಂಕೀರ್ತನೆ ನಡೆಯಲಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ,ಆಡಳಿತ ಮೊಕ್ತೇಸರ ಜಯರಾಮ ಹೊಳ್ಳ ನಾಗ್ತಿಮಾರು, ಪ್ರಮುಖರಾದ ಜನಾರ್ದನ ಕುಲಾಲ್ ಬೊಂಡಾಲ, ನಾಗೇಶ್ ಕಲ್ಲಡ್ಕ, ದಿನೇಶ್ ಅಮ್ಟೂರು, ವಿನೋದ್ ಶೆಟ್ಟಿ ಬೊಂಡಾಲ, ನಾಗೇಶ್ ಶೆಟ್ಟಿ ಬೊಂಡಾಲ, ಚಂದಪ್ಪ ಮೂಲ್ಯ, ವಸಂತ ಕುಲಾಲ್, ನಾರಾಯಣ, ಹರೀಶ್ ಆಚಾರ್ಯ ಕಲ್ಲಡ್ಕ, ರತ್ನಾಕರ್ ಕಾಫಿಕಾಡ್ ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ ಸಂಜೆ ಶ್ರೀ ಕ್ಷೇತ್ರಕ್ಕೆ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ಮುಂಭಾಗದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಉದ್ಯಮಿ ರಾಜೇಂದ್ರ ಹೊಳ್ಳ, ಹಿರಿಯರಾದ ವಿಠಲ ಪ್ರಭು ಚಾಲನೆ ನೀಡಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ, ಆಡಳಿತ ಮೊಕ್ತೇಸರ ಜಯರಾಮ ಹೊಳ್ಳ, ಪ್ರಮುಖರಾದ ಬಿ.ಸುಧಾಕರ ರೈ, ವಜ್ರನಾಥ ಕಲ್ಲಡ್ಕ, ದಿನೇಶ್ ಅಮ್ಟೂರು, ಬೊಂಡಾಲ ಜನಾರ್ದನ ಕುಲಾಲ್, ಬೊಂಡಾಲ ವಿನೋದ್ ಕುಮಾರ್ ಶೆಟ್ಟಿ, ನಾಗೇಶ್ ಕಲ್ಲಡ್ಕ, ರಾಜಾರಾಮ ಐತಾಳ್, ನಾಗೇಶ್ ಶೆಟ್ಟಿ ಬೊಂಡಾಲ, ದಯಾನಂದ ಕುಮಾರ್ ಬೊಂಡಾಲ, ಬಾಲಕೃಷ್ಣ ಆಳ್ವ ಮತ್ತು ಶ್ರೀಧರ ಶೆಟ್ಟಿ ಬೊಂಡಾಲ, ಸಹಿತ ಪ್ರಮುಖರು ಉಪಸ್ಥಿತರಿದ್ದರು. ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ಮಕ್ಕಳ ಕುಣಿತ ಭಜನೆ ಸಹಿತ ಹಸಿರುವಾಣಿ ಹೊರೆಕಾಣಿಕೆಯಲ್ಲಿ ಭಕ್ತರಿಂದ ವೈವಿಧ್ಯಮಯ ಪ್ರದರ್ಶನಗಳು ಕಂಡುಬಂದವು. ಬಳಿಕ ಉಗ್ರಾಣ ಮುಹೂರ್ತ ನೆರವೇರಿತು.