ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ ತಾಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟ ಒಟ್ಟು 216 ಮಂದಿ ಆರ್ಜಿ ಸಲ್ಲಿಸಿದ್ದು, 192 ಅರ್ಜಿ ಗಳು ಸಿಂಧುವಾಗಿದ್ದು ಈಗಾಗಲೇ ತಾಲೂಕಿನಲ್ಲಿ 63 ಮಂದಿ ಗೆ ಮೊದಲ ಕಂತಿನ ಪರಿಹಾರ ಮೊತ್ತ ಬಿಡುಗಡೆ ಯಾಗಿದೆ, ಇದರಲ್ಲಿ ಬಂಟ್ವಾಳ ಕ್ಷೇತ್ರದ 43 ಮಂದಿ ಗೆ ಪರಿಹಾರ ಮೊತ್ತದ ಚೆಕ್ ಅನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿತರಿಸಿದರು.
ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲಾ 1 ಲಕ್ಷ ರೂ ಚೆಕ್ ಅನ್ನು ಶಾಸಕರು ವಿತರಿಸಿದರು. ಮೃತ ಎ.ಪಿ.ಎಲ್.ಕುಟುಂಬದ ಸದಸ್ಯರಿಗೆ ತಲಾ 50 ಸಾವಿರ ರೂ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ, ಬಂಟ್ವಾಳ ದಲ್ಲಿ 11 ಮಂದಿ ಹಲವು ಕಾರಣಗಳಿಂದ ಪರಿಹಾರ ಮೊತ್ತ ಬೇಡ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು. ಈಗಾಗಲೇ ಮೊದಲ ಕಂತಿನ ಪರಿಹಾರದ ಮೊತ್ತ ವನ್ನು ನೀಡಲಾಗಿದ್ದು , ಶೀಘ್ರವಾಗಿ ಕೋವಿಡ್ ನಿಂದ ಮೃತಪಟ್ಟ ಪ್ರತಿಯೊಬ್ಬ ರಿಗೂ ಸರಕಾರದ ಪರಿಹಾರದ ಮೊತ್ತವನ್ನು ನೀಡಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಸರಕಾರ ಹಸಿವಿಗಾಗಿ ಉಚಿತ ಅಕ್ಕಿ, ಪ್ರತಿಯೊಬ್ಬರಿಗೂ ಉಚಿತ ವ್ಯಾಕ್ಸಿನೇಷನ್ ಅನ್ನು ನೀಡಿದೆ ಎಂದು ಅವರು ಹೇಳಿದರು.
ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ, ವೀರಕಂಭ ಗ್ರಾ.ಪಂ.ಅದ್ಯಕ್ಷ ದಿನೇಶ್, ಬರಿಮಾರು ಗ್ರಾ.ಪಂ.ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸದಾಶಿವ ಬರಿಮಾರು, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ, ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಕೈತ್ರೋಡಿ, ಮಂಚಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ್ ದಾಸ ಶೆಟ್ಟಿ, ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷ ಪ್ರಕಾಶ್ ಮಡಿಮೊಗೆರು, ಪುರಸಭಾ ಸದಸ್ಯೆ ಮೀನಾಕ್ಷಿ, ಉಪತಹಸೀಲ್ದಾರ್ ನರೇಂದ್ರನಾಥ್ ಭಟ್ ಮಿತ್ತೂರು, ಪಾಣೆಮಂಗಳೂರು ಕಂದಾಯ ನಿರೀಕ್ಷಕ ಧರ್ಮ ಸಾಮ್ರಾಜ್ಯ, ವಿಟ್ಲ ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಎಚ್, ಬಂಟ್ವಾಳ ಕಂದಾಯ ನಿರೀಕ್ಷಕ ಕುಮಾರ್ ಟಿ.ಸಿ, ವಿವಿಧ ಗ್ರಾ.ಪಂ.ಸದಸ್ಯರು, ಗ್ರಾಮ ಕರಣೀಕರು ಉಪಸ್ಥಿತರಿದ್ದರು.