ಬಂಟ್ವಾಳನ್ಯೂಸ್ ವರದಿ, www.bantwalnews.com REPORT ಸಂಪಾದಕ: ಹರೀಶ ಮಾಂಬಾಡಿ
ವಿಧಾನಪರಿಷತ್ತು ಚುನಾವಣೆಗೆ ಸಂಬಂಧಿಸಿ ದ.ಕ. ಮತ್ತು ಉಡುಪಿ ಕ್ಷೇತ್ರಗಳ 2 ಸ್ಥಾನಗಳಿಗೆ ಮತದಾನ ಮುಕ್ತಾಯವಾಗಿದ್ದು, ಒಟ್ಟಾರೆಯಾಗಿ ಶೇ.99.55 ಮತದಾನವಾಗಿದೆ. ಇವುಗಳ ಪೈಕಿ ಬಂಟ್ವಾಳ, ಬೈಂದೂರು, ಹೆಬ್ರಿ, ಮೂಡುಬಿದಿರೆ ಮತ್ತು ಕಡಬಗಳಲ್ಲಿ ಶೇ.100 ಮತ ಚಲಾವಣೆ ಆಗಿದೆ. ಒಟ್ಟು 6040 ಮತದಾರರಿದ್ದು, ಇವರ ಪೈಕಿ 2915 ಪುರುಷರು ಮತ್ತು 3125 ಮಹಿಳೆಯರು ಮತದಾನಕ್ಕೆ ಅರ್ಹರಾಗಿದ್ದರು. ಇವರ ಪೈಕಿ, 2902 ಪುರುಷರು ಮತ್ತು 3111 ಮಹಿಳೆಯರು ಸೇರಿ ಒಟ್ಟು 6013 ಮಂದಿ ಮತ ಚಲಾಯಿಸಿದ್ದಾರೆ. 27 ಮಂದಿ ಮತದಾನಕ್ಕೆ ಗೈರುಹಾಜರಾಗಿದ್ದಾರೆ. ಬಂಟ್ವಾಳ ತಾಲೂಕಿನ 58 ಗ್ರಾಪಂಗಳು ಮತ್ತು ಬಂಟ್ವಾಳ ಪುರಸಭೆ ಸೇರಿ 59 ಬೂತ್ ಗಳಲ್ಲ್ಇ ಒಟ್ಟು 903 ಮತಗಳಿದ್ದು, ಎಲ್ಲವೂ ಚಲಾವಣೆಯಾಗಿವೆ. ಇಲ್ಲಿ ಮಧ್ಯಾಹ್ನದ ವೇಳೆಗೇ ಶೇ.96 ಮತ ಚಲಾವಣೆ ಆಗಿದ್ದು ವಿಶೇಷ. ಡಿ. 14ರಂದು ಮತ ಎಣಿಕೆ ನಡೆಯಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯಿಂದ, ಮಂಜುನಾಥ ಭಂಡಾರಿ ಕಾಂಗ್ರೆಸ್ ಮತ್ತು ಶಾಫಿ ಬೆಳ್ಳಾರೆ ಎಸ್.ಡಿ.ಪಿ.ಐ.ನಿಂದ ಕಣಕ್ಕಿಳಿದಿದ್ದಾರೆ. ಬಂಟ್ವಾಳದಲ್ಲಿ ತಹಸೀಲ್ದಾರ್ ರಶ್ಮಿ ಎಸ್.ಆರ್ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ತಾಲೂಕಾಡಳಿತದಿಂದ ನಡೆದಿದ್ದು, ಇಒ ರಾಜಣ್ಣ, ಚುನಾವಣಾ ಶಾಖೆ ಉಪತಹಸೀಲ್ದಾರ್ ನವೀನ್ ಬೆಂಜನಪದವು, ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ ವಿವಿಧ ಇಲಾಖೆಗಳ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.