ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೌಲಾನಾ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ರವರಿಗೆ ದಾರುಲ್ ಅಶ್ಅರಿಯ ವಿದ್ಯಾ ಸಂಸ್ಥೆ ಸುರಿಬೈಲಿನಲ್ಲಿ ಸನ್ಮಾನಿಸಲಾಯಿತು.
ಶೈಖುನಾ ವಾಲೆಮಂಡೋವ್ ಉಸ್ತಾದರ ಅಧ್ಯಕ್ಷತೆಯಲ್ಲಿ ಸುರಿಬೈಲು ಉಸ್ತಾದರ ಮಖಾಂ ಝಿಯಾರತ್ನೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ದಾರುಲ್ ಅಶ್ಅರಿಯ ಜನರಲ್ ಮ್ಯಾನೇಜರ್ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಭಿನಂದನಾ ಭಾಷಣ ನಡೆಸಿದರು ಬಳಿಕ ಮೌಲಾನಾ ಶಾಫಿ ಸಅದಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಎಲ್ಲಾ ಸೌಕರ್ಯಗಳನ್ನು ಒದಗಿಸುವಲ್ಲಿ ಗರಿಷ್ಠ ಪ್ರಯತ್ನವನ್ನು ನಡೆಸುವೆನೆಂದು ಹೇಳಿದರು.
ಸಯ್ಯಿದ್ ಮದಕ ತಂಙಳ್, ಬೊಳ್ಮಾರ್ ಉಸ್ತಾದ್, ಮಂಚಿ ಉಸ್ತಾದ್, ಸೇರಾಜೆ ಉಸ್ತಾದ್, ಮುಹಮ್ಮದ್ ಮದನಿ ಸಾಮಣಿಗೆ, ರಝ್ಝಾಕ್ ಸಖಾಫಿ ಬೊಳ್ಳಾಯಿ, ಅಬ್ದುಲ್ಲಾ ಮುಸ್ಲಿಯಾರ್ ದುಬಾಯಿ, ಇಬ್ರಾಹಿಂ ಸಖಾಫಿ ದಾವಣಿಗೆರೆ, ಇಬ್ರಾಹಿಂ ಸಖಾಫಿ ಸೆರ್ಕಳ, ಅಕ್ಬರ್ ಅಲಿ ಮದನಿ ಆಲಂಪಾಡಿ, ಮತ್ತು ಹಲವು ಗಣ್ಯರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಸಲಾಯಿತು
ಉಮರಾ ನೇತಾರ ಸುಲೈಮಾನ್ ಹಾಜಿ ಸಿಂಗಾರಿ, ಇರಾ ಗ್ರಾಮ ನಿಕಟ ಪೂರ್ವ ಅಧ್ಯಕ್ಷರು ಅಬ್ದುಲ್ ರಝಾಕ್ ಕುಕ್ಕಾಜೆ, ಅಬೂಬಕ್ಕರ್ ಸೆರ್ಕಳ, ಸೇರಿದಂತೆ ಹಲವು ಸಾಮಾಜಿಕ ರಾಜಕೀಯ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು ವಾಲೆಮಂಡೋವ್ ಉಸ್ತಾದರ ಅಧ್ಯಕ್ಷೀಯ ಭಾಷಣದ ನಂತರ ಸುನ್ನಿ ಫೈಝಿ ಉಸ್ತಾದರ ಕೃತಜ್ಞತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…