ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಕಂದೂರಿನ ಶ್ರೀ ಮಾಚಿದೇವ ಸಭಾಭವನ ವಠಾರದಲ್ಲಿ ಮಡಿವಾಳ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ ನಡೆಯಿತು.
ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ(ರಿ) ಕಂದೂರು ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಪಿ.ಸಿ ಗ್ರೂಪ್ ಮಂಗಳೂರು ಮುಖ್ಯ ಪ್ರಬಂಧಕ ಹರೀಶ್ ಕುದುಂಬ್ಲಾಡಿ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಅಧ್ಯಕ್ಷ ಎನ್ ಕೆ ಶಿವ ಅಧ್ಯಕ್ಷತೆ ವಹಿಸಿದ್ದರು. ಯುವಬಳಗದ ವತಿಯಿಂದ ಸದಸ್ಯರಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.. ಸಮಿತಿಯ ಗೌರವ ಸಲಹೆಗಾರರಾದ ಸೋಮಪ್ಪ ಮಾಸ್ತರ್ ರಾಯಿ , ಪುಷ್ಪರಾಜ ಕುಕ್ಕಾಜೆ , ಹರೀಶ್ ಮಂಕುಡೆ , ಮಹಿಳಾ ಸಮಿತಿ ಅಧ್ಯಕ್ಷೆ ವಿನೋದಾ ಬಿ.ಸಿ ರೋಡ್ ಉಪಸ್ಥಿತರಿದ್ದರು ಸ್ಪರ್ಶಾ ಪಂಜಿಕಲ್ಲು ಪ್ರಾರ್ಥಿಸಿದರು, ಯುವ ಬಳಗದ ಅಧ್ಯಕ್ಷ ದಿಲೀಪ್ ಪಂಜಿಕಲ್ಲು ಸ್ವಾಗತಿಸಿ , ಕಾರ್ಯದರ್ಶಿ ವನೀತ್ ವಂದಿಸಿದರು ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…