ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ, ಬಿ.ಸಿ.ರೋಡು ಆಶ್ರಯದಲ್ಲಿ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಸಭಾ ಕಾರ್‍ಯಕ್ರಮದಲ್ಲಿ ಮಂಗಳೂರು ಸರಕಾರಿ ಮಹಿಳಾ ಪಾಲಿಟೆಕ್ನಿಕ್, ಬೊಂದೇಲ್ ನಿವೃತ್ತ ಪ್ರಿನ್ಸಿಪಾಲ್ ಎ. ಕಲಾವತಿ ಕಾಮತ್ ಹಾಗೂ ಪುತ್ತೂರಿನ ಸಾಮಾಜಿಕ ಕಾರ್‍ಯಕರ್ತೆ ಕೆ. ವತ್ಸಲಾ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಅತಿ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಡಿಗ್ರಿ, ವೃತ್ತಿ ಶಿಕ್ಷಣ ಕೋರ್ಸುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಿತಿ ವತಿಯಿಂದ ಚಿನ್ನದ ಪದಕವನ್ನು ನೀಡಿ ಪುರಸ್ಕರಿಸಲಾಯಿತು ಖ್ಯಾತ ಬಾಣಸಿಗರಾದ ನಾಗೇಶ್ ಎಸ್. ನಾಯಕ್, ದ.ಕ. ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ವಿಜ್ಞಾನ ಶಿಕ್ಷಕರಾದ ಬಿ. ರಾಧಾಕೃಷ್ಣ ಬಾಳಿಗ ಹಾಗೂ ನಿವೃತ್ತ ಪ್ರಾಧ್ಯಾಪಕಿ ಪ್ರೇಮಲತಾ ಪೈ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಯು. ಸುರೇಶ್ ನಾಯಕ್ ಸಭಾಧ್ಯಕ್ಷತೆಯನ್ನು ವಹಿಸಿದರು. ಸಮಿತಿಯ ದುರ್ಗಾದಾಸ್ ಶೆಣೈ, ಬಿ. ಕೃಷ್ಣ ನಾಯಕ್, ಬಿ. ವಾಸುದೇವ ಭಂಡಾರ್ಕರ್, ಪವನ್ ಕುಮಾರ್ ನಾಯಕ್, ನಾಗೇಂದ್ರ ನಾಯಕ್, ಕೆ. ರಘುವೀರ್ ಕಾಮತ್ ಹಾಗೂ ಇತರ ಸದಸ್ಯರು ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…