ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಭಾರತೀಯ ಸೇನೆಯ ನಿವೃತ್ತ ಯೋಧ, ಅಮ್ಟೂರು ಗ್ರಾಮ ಬೈದರಡ್ಕ ನಿವಾಸಿ, ಕ್ಯಾಪ್ಟನ್ ಬಿ. ಶ್ರೀನಿವಾಸ ಶೆಟ್ಟಿ (82) ಡಿ. 5ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ , ಇಬ್ಬರು ಪುತ್ರ, ಪುತ್ರಿಯನ್ನು ಅವರು ಹೊಂದಿದ್ದರು.
ಸಿವಿಲ್ ಇಂಜಿನಿಯರ್ ವ್ಯಾಸಂಗದ ಬಳಿಕ, ಭಾರತೀಯ ಭೂ ಸೇನೆಯ ಅರ್ಟಿಲರಿ ವಿಭಾಗಕ್ಕೆ ಸೇರ್ಪಡೆಯಾಗಿದ್ದು ಅಸ್ಸಾಂ, ರಾಜಸ್ಥಾನ, ಅರುಣಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರ ಸಹಿತ 12 ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದರು. 1965 ಮತ್ತು 1971ರ ಯುದ್ಧ ಸಂದರ್ಭ ಹೈ ಅಪ್ಟಿಟ್ಯೂಡ್ ಪ್ರದೇಶಗಳಲ್ಲಿ (ಹತ್ತು ಸಾವಿರ ಅಡಿಗಳಷ್ಟು ಎತ್ತರ) ಕರ್ತವ್ಯ ನಿರ್ವಹಿಸಿದ ಕೀರ್ತಿ ಅವರಿಗಿದೆ. ಸೇನಾ ನಿವೃತ್ತಿಯ ಬಳಿಕ ಸ್ವಗ್ರಾಮದಲ್ಲಿ ಕೃಷಿ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 1939ರ ಅಕ್ಟೋಬರ್ 1ರಂದು ಜಪ್ಪು ಬಿ ರಾಮಯ್ಯ ಶೆಟ್ಟಿ ಲಕ್ಷ್ಮಿ ಶೆಟ್ಟಿ ದಂಪತಿ ಪುತ್ರರಾಗಿ ಜನಿಸಿದ ಅವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿ ಪ್ರೌಢ ಶಿಕ್ಷಣವನ್ನು ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಪಡೆದರು. ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಸಿವಿಲ್ ಇಂಜಿನಿಯರ್ ವಿದ್ಯಾಭ್ಯಶ ನಡೆಸಿ, 1964ರಲ್ಲಿ ಸೇನೆಗೆ ಸೇರಿದರು. 1985ರಲ್ಲಿ ನಿವೃತ್ತ ಹೊಂದಿದ ಬಳಿಕ ಅಮ್ಟೂರು ಗ್ರಾಮದಲ್ಲಿ ಸಾಮಾಜಿಕ ಸೇವಾನಿರತರಾಗಿದ್ದರು. ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಎ.ರುಕ್ಮಯ ಪೂಜಾರಿ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಪದ್ಮನಾಭ ರೈ, ಗೋಪಾಲ್ ಪೂಜಾರಿ, ಗೋಳ್ತಮಜಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೈದರಡ್ಕ ಪ್ರಭಾಕರ ಶೆಟ್ಟಿ, ಚಂದ್ರಶೇಖರ್ ರೈ, ಮನೋಜ್ ಕಟ್ಟೆಮಾರ್, ಬಾಳಿಕೆ ಕಾಂತಪ್ಪ ಶೆಟ್ಟಿ, ಮಹಾಬಲ ಸಾಲಿಯಾನ್, ಮೋಹನ್ ಕಟ್ಟೆಮಾರ್ ಮತ್ತು ಪ್ರಮುಖರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದ್ದಾರೆ.