ಬಂಟ್ವಾಳ: ದ.ಕ.ಜಿಲ್ಲೆಯ ಸಾಹಿತ್ಯಾಸಕ್ತರು ತನ್ನ ಮೇಲೆ ಭರವಸೆ ಇಟ್ಟು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಗೆಲ್ಲಿಸುವ ಕಾರ್ಯ ಮಾಡಿದ್ದು, ತಾನು ಹಿಂದೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ ಜಿಲ್ಲಾ ಪರಿಷತ್ತನ್ನು ಮಾದರಿ ಸಾಹಿತ್ಯ ಪರಿಷತ್ತಾಗಿ ರಾಜ್ಯದಲ್ಲೇ ಗುರುತಿಸುವಂತೆ ಕಾರ್ಯ ಮಾಡುವ ಪ್ರಯತ್ನ ಮಾಡಲಿದ್ದೇನೆ ಎಂದು ಕಸಾಪ ನೂತನ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಎಂ.ಪಿ.ಹೇಳಿದರು.
ಅವರು ಶನಿವಾರ ಸಂಜೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯಲ್ಲಿ ಬಂಟ್ವಾಳದ ಸಾಹಿತ್ಯಾಸಕ್ತರು ಸೇರಿ ಮಾಡಿದ ಗೌರವಾರ್ಪಣೆಯನ್ನು ಸ್ವೀಕರಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷರ ಆಯ್ಕೆಯ ಬಳಿಕ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಸಾಹಿತ್ಯ ಚಟುವಟಿಕೆಗಳನ್ನು ಬೆಂಬಲಿಸುವ ಕಾರ್ಯದ ಜತೆಗೆ ಎಲ್ಲಾ ಚಟುವಟಿಕೆಗಳು ಆರಂಭಗೊಳ್ಳಲಿದೆ ಎಂದರು. ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಮೋಹನ್ ರಾವ್, ತಾಲೂಕು ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ, ವಿಶ್ವನಾಥ್ ಬಂಟ್ವಾಳ, ಸುಭಾಶ್ಚಂದ್ರ ಜೈನ್, ರವೀಂದ್ರ ಕುಕ್ಕಾಜೆ, ವಿ.ಸು.ಭಟ್, ಶಾಂತಾ ಕನ್ಯಾನ, ಶಿವಶಂಕರ್, ರಾಜಾ ಬಂಟ್ವಾಳ, ಪೂವಪ್ಪ ನೇರಳಕಟ್ಟೆ, ಶಿವಪ್ಪ ಪೂಜಾರಿ ಮೊದಲಾದವರಿದ್ದರು.