ಬಂಟ್ವಾಳ: ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳು ಮಾನವನಲ್ಲಿ ಮಾಡಬಾರದ ವರ್ತನೆಗಳನ್ನು ಮಾಡಿಸುತ್ತವೆ. ಜಾತಿ , ಮತಗಳಲ್ಲಿ ಹರಡಿರುವ ಭಯ, ಸಂಶಯ,ಅಪನಂಬಿಕೆಗಳು ರಾಷ್ಟ್ರೀಯ ಭಾವೈಕ್ಯಕ್ಕೆ ಅಡ್ಡಿಯಾಗುತ್ತಿವೆ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯವನ್ನೂ ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆನ್ನೂ ಬೆಳೆಸಿಕೊಂಡು ಸಮಾಜದಲ್ಲಿ ಸಾಮರಸ್ಯವನ್ನು ಉಳಿಸಬೇಕು ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳದಲ್ಲಿ ಏರ್ಪಡಿಸಲಾದ ಸ್ವಾತಂತ್ರ್ಯ ಅಮೃತೋತ್ಸವ ಸಮಿತಿ , ರಾಷ್ಟ್ರೀ ಸೇವಾ ಯೋಜನೆ ಮತ್ತು ರೇಂಜರ್‍ಸ್ ರೋವರ್‍ಸ್ ಘಟಕಗಳ ವತಿಯಿಂದ ಪ್ರಯುಕ್ತ ಏರ್ಪಡಿಸಲಾದ ರಾಷ್ಟ್ರೀಯ ಭಾವೈಕ್ಯ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಸತೀಶ ಗಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ರಾಷ್ಟೀಯ ಭಾವನೆಯನ್ನು ಜಾಗೃತಗೊಳಿಸುವುದು ಇಂದು ಅಗತ್ಯವಾಗಿದೆ. ಶಿಕ್ಷಣದ ಜೊತೆಗೆ ಭಾರತದ ಇತಿಹಾಸ ಅರಿತುಕೊಂಡು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರೊ. ಹೈದರಾಲಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಾಧ್ಯಾಪಕ ಪ್ರೊ. ನಂದಕಿಶೋರ್,. ಪ್ರಾಧ್ಯಾಪಕಿ ಶಶಿಕಲಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಬೋಧಕಿ ಡಾ. ಅಪರ್ಣಾ ಆಳ್ವ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ದೀಪಾ ನಿರೂಪಿಸಿ, ತನುಶ್ರೀ ವಂದಿಸಿದರು