ಬಂಟ್ವಾಳ: ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಟ್ರಸ್ಟ್ ವತಿಯಿಂದ ಫೆಬ್ರವರಿಯಲ್ಲಿ ಬಿ.ಸಿ.ರೋಡಿನಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವ ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಚಾಲಕ ಮತ್ತು ಕಲಾವಿದ ಮೋಹನದಾಸ ಕೊಟ್ಟಾರಿ ರಚಿಸಿದ ಮೂರು ನಾಟಕಗಳ ಮುಹೂರ್ತ ಕಾರ್ಯಕ್ರಮ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಖರ್ಚಿಗ್ ಕಾಸಿಜ್ಜಿ, ಮೋಕೆಡೊಂತೆ ಜೋಕೆ ಮತ್ತು ತೆಲಿಪುವರಾ ಅತ್ತ್ ಬುಲಿಪುವರಾ ಎಂಬ ತುಳು ನಾಟಕಗಳನ್ನು ಮೋಹನದಾಸ ಕೊಟ್ಟಾರಿ ರಚಿಸಿದ್ದಾರೆ. ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ಚರ ಭಟ್ ಪೂಜೆ ಸಲ್ಲಿಸಿ, ಆಶೀರ್ವದಿಸಿ ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡು ಜನಮಾನಸ ಗೆಲ್ಲಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರಮುಖರಾದ ಮೋನಪ್ಪ ದೇವಸ್ಯ, ರತ್ನದೇವ ಪುಂಜಾಲಕಟ್ಟೆ, ಅರುಣ್ ಚಂದ್ರ ಬಿ.ಸಿ.ರೋಡ್, ರಾಜೇಶ್ ಆಚಾರ್ಯ ಫರಂಗಿಪೇಟೆ, ದಾಮೋದರ ಆಚಾರ್ಯ ಕುರಿಯಾಳ, ದಿನೇಶ್ ಶೆಟ್ಟಿಗಾರ್, ರಚನ್ ಆಲಾಡಿ, ಹಂಸಿಕಾ ಮತ್ತಿತರರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)