ಬಂಟ್ವಾಳ: ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಸ್ಥಾನದ ರಾಜಾಂಗಣದಲ್ಲಿ ಗೌರವ ಸಲಹೆಗಾರರ ಸಭೆ ನಡೆಯಿತು.
ಬ್ರಹ್ಮಕಲಶ ಪ್ರಯುಕ್ತ ಈಗಾಗಲೇ ನಡೆದಿರುವ ಪೂರ್ವಭಾವಿ ಸಭೆಗಳು ಮತ್ತು ಮುಂದೆ ನಡೆಯಲಿರುವ ಯೋಜನೆಗಳ ಬಗ್ಗೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ ಮಾಹಿತಿ ನೀಡಿದರು.
ಭಾನುವಾರ ನವೆಂಬರ್ 21ರಂದು ಜೀರ್ಣೋದ್ಧಾರ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಲಿದ್ದು, ಬಳಿಕ ಕರಸೇವಕರು ಮತ್ತು ಕಾರ್ಮಿಕರಿಗೆ ಶ್ರಮಿಕ ಸಮಾವೇಶ ಆಯೋಜಿಸಲಾಗಿದೆ. ಹೆಚ್ಚಿನ ಕಾಮಗಾರಿಗಳನ್ನು ಶ್ರಮದಾನದ ಮೂಲಕ ನೆರವೇರಿಸುವ ಉದ್ದೇಶದಿಂದ ಹಾಗೂ ಬ್ರಹ್ಮಕಲಶೋತ್ಸವದ ಖರ್ಚುವೆಚ್ಚಗಳ ಹೊರೆಯನ್ನು ತಗ್ಗಿಸುವ ಸಲುವಾಗಿ ಈ ಸಮಾವೇಶದ ಮೂಲಕ ಕಾರ್ಮಿಕರನ್ನು ಒಗ್ಗೂಡಿಸುವ ಕೆಲಸ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ತೇವು ತಾರನಾಥ ಕೊಟ್ಟಾರಿ ತಿಳಿಸಿದರು.
ಗೌರವ ಸಲಹೆಗಾರರ ಸಲಹೆಗಳು ಬ್ರಹ್ಮಕಲಶೋತ್ಸವ ಯಶಸ್ಸಿಗೆ ಕಾರಣವಾಗುವುದು. ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳಲ್ಲೂ ಸಂಪೂರ್ಣವಾಗಿ ಭಾಗವಹಿಸಿ ಮಾರ್ಗದರ್ಶನ ನೀಡಬೇಕಾಗಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ತಿಳಿಸಿದರು.
ದೇವಸ್ಥಾನ ಸಂಸ್ಕಾರ ನೀಡುವ ಕೇಂದ್ರವಾಗಬೇಕು. ಬ್ರಹ್ಮಕಲಶೋತ್ಸವ ಮೂಲಕ ಸಮಾಜದಲ್ಲಿ ಪರಿವರ್ತನೆಯಾಗಬೇಕು. ನಾಲ್ಕು ಗ್ರಾಮದ ಗ್ರಾಮಸ್ಥರು ಒಂದಲ್ಲ ರೀತಿಯಲ್ಲಿ ಕೈಜೋಡಿಸುವ ಮೂಲಕ ಬ್ರಹ್ಮಕಲಶ ಯಶಸ್ವಿಗೊಳಿಸಬೇಕು ಎಂದು ಕೆ.ಪಿ. ಶೆಟ್ಟಿ ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಎಂ.ಆರ್. ನಾಯರ್, ನಾರಾಯಣ ಹೊಳ್ಳ, ವಿಶ್ವನಾಥ ಬಿ.ಸಿ.ರೋಡು, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ದಿವಾಕರ ಪಂಬದಬೆಟ್ಟು, ಅರ್ಚಕ ಶಿವರಾಮ ಶಿಬರಾಯ ಮಾಹಿತಿಯನ್ನು ನೀಡಿದರು.
ಪ್ರಮುಖರಾದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ವಾಮಯ್ಯ ಕೋಟ್ಯಾನ್ ಕನಪಾಡಿ, ಪದ್ಮನಾಭ ರಾವ್ ಕನಪಾಡಿ, ರಮಾನಾಥ ರೈ ಕುಪ್ಪಿಲ, ಪುರುಷ ಎನ್ ಸಾಲ್ಯಾನ್, ರಾಮ್ ದಾಸ್ ಮಜಿಲಗುತ್ತು, ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ರಾಘವ ಕನಪಾಡಿ, ಪ್ರಕಾಶ್ ಬಿ ಶೆಟ್ಟಿ ಶ್ರೀಶೈಲ ತುಂಬೆ, ಮೋನಪ್ಪ ಬೆಳ್ಚಡ ಮಜಿ, ಮಹಾಬಲ ಶೆಟ್ಟಿ ನುಂಗೂರು, ಸುರೇಶ್ ಭಂಡಾರಿ ಅರ್ಬಿ, ಪ್ರವೀಣ್ ಶೆಟ್ಟಿ ಪೇರ್ಲಬೈಲ್, ಐತಪ್ಪ ಆಳ್ವ ಸುಜೀರ್, ಶಂಕರ್ ಶೆಟ್ಟಿ, ಜನಾರ್ದನ ಸಾಲ್ಯಾನ್ ದರಿಬಾಗಿಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ದಿವಾಕರ ಶೆಟ್ಟಿ ಕುಪ್ಪಿಲ, ಎಂ. ಸತೀಶ್ ಭಂಡಾರಿ ಕುಳತ್ತಬೆಟ್ಟು, ಯೋಗೀಶ್ ದರಿಬಾಗಿಲು, ಗೋಪಾಲ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ್ ನೆತ್ತರಕೆರೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.