ಸಾಧಕರು

ದುಬೈನಲ್ಲಿ ಮಿಂಚುತ್ತಿರುವ ತುಳುನಾಡಿನ ಕಿಶೋರ್ ಶೆಟ್ಟಿ

ಕರ್ನಾಟಕ ದಿಂದ ಅದರಲ್ಲೂ ತುಳು ನಾಡಿನ ಅನೇಕರು ಉದ್ಯೋಗ ಶಿಕ್ಷಣ ವ್ಯಾಪಾರ ಹೀಗೆ ಅನೇಕ ಉದ್ದೇಶಗಳಿಗಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಸಂಬಂಧ ವನ್ನು ಹೂಡಿದ್ದಾರೆ ಹೀಗೆ ಅನೇಕ ರು ತಮ್ಮ ದುಡಿಮೆಯ ಮೂಲಕ ಯಶಸ್ಸನ್ನು ಸಂಪಾದಿಸಿ ತಮ್ಮ ಊರಿನಲ್ಲಿ ಅವಶ್ಯಕತೆ ಇರುವವರಿಗೆ ಸಹಾಯ ವನ್ನು ಮಾಡುತ್ತಿದ್ದಾರೆ.ಹೀಗೆ ತೆರೆ ಮರೆಯಲ್ಲಿ ನಿಂತು ತನ್ನಿಂದ ಆದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವವರಲ್ಲಿ  ಕಾರ್ಕಳ ಕುಂಟಾಡಿ ಮೂಲದ ಇದೀಗ ದುಬೈನಲ್ಲಿ ಕಳೆದ ಹತ್ತು ವರ್ಷದಿಂದ ವಾಸವಾಗಿರುವ ಕಿಶೋರ್ ಶಿವರಾಮ್ ಶೆಟ್ಟಿ ಕೂಡ ಒಬ್ಬರು.

ಉಡುಪಿಯ ಕಾರ್ಕಳ ಮೂಲದ ಮನೆತನದವರಾದರೂ ಹುಟ್ಟಿದ್ದು, ಬೆಳೆದಿದ್ದು ವಿದ್ಯಾಭ್ಯಾಸ ಎಲ್ಲವೂ ಮುಂಬೈನಲ್ಲಿ. ಮುಂಬೈನ ಡೊಂಬಿವಿಲಿಯಲ್ಲಿ ವಾಸವಾಗಿದ್ದವರು ಜೀವನದಲ್ಲಿ ಏನಾದರೂ ಮಾಡಬೇಕೆಂಬ ಛಲ ಉಳ್ಳ ವ್ಯಕ್ತಿ. ಹೀಗಿರುವಾಗ ಅವರಿಗೆ ದುಬೈನ ಖ್ಯಾತ ಸಂಸ್ಥೆ ಡಾ||ಬು ಅಬ್ದುಲ್ಲಾ ಗ್ರೂಪ್ನಲ್ಲಿ ಉದ್ಯೋಗವಕಾಶ ಹುಡುಕಿ ಬಂತು ಹೀಗೆ ದುಬೈಗೆ ಹೋದ ಕಿಶೋರ್ ಸದಾ ಸಮಾಜ ಸೇವೆಯ ಬಗ್ಗೆ ಹೆಚ್ಚು ಯೋಚಿಸಲಾರಂಭಿಸಿದರು.ತನ್ನ ಸಂಪಾದನೆಯಲ್ಲಿ ಅನೇಕ ಶಿಕ್ಷಣ  ಉದ್ಯೋಗ ಚಿಕಿತ್ಸೆಗಾಗಿ ಸಹಾಯ ಮಾಡಲಾರಂಭಿಸಿದರು.ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಇವರು ನೆರವಾಗುವ ಮೂಲಕ ಅನೇಕ ಕುಟುಂಬದ ಕಣ್ಣೀರನ್ನು ಒರೆಸುವ ಪ್ರಯತ್ನವನ್ನು ಮಾಡಿದ್ದಾರೆ.ಕೋವಿಡ್ ಸಂದರ್ಬದಲ್ಲಿ ಇವರ ಸೇವೆಗೆ ಇವರಿಗೆ ದುಬೈನಲ್ಲಿ ಗೌರವಕೂಡ ದೊರಕಿದೆ

 ಇವರು  ಸ್ವತಃ ಒಬ್ಬ ಕ್ರೀಡಾ ಪಟು ಆಗಿದ್ದು ಕ್ರಿಕೇಟ್ ಹಾಗು ಫುಟ್ಬಾಲ್ ಆಡುತ್ತಾರೆ. ಇವರ ಹೆಸರಿನಲ್ಲಿ ಗಿನ್ನಿಸ್ ದಾಖಲೆ ಕೂಡ ಇದೆ. ದುಬೈನಲ್ಲಿ ನಡೆದ ಅನೇಕ ರಾಷ್ಟ್ರಗಳ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮ ವು ಗಿನ್ನಿಸ್ ದಾಖಲೆ ಯ ಪುರಸ್ಕಾರ ಕ್ಕೆ ಪಾತ್ರವಾಗಿತ್ತು ಕಿಶೋರ್ ಅವರು ಈ ಕಾರ್ಯಕ್ರಮ ದ ಭಾಗವಾಗಿದ್ದರು.ಇವರಿಗೆ ದುಬೈ ನಲ್ಲಿ ಅನೇಕ ಪ್ರಶಸ್ತಿಗಳು ದೊರಕಿವೆ.ಇಷ್ಟಾದರು ಇವರು ಯಾವುದೇ ಅಹಂಕಾರ ವಿಲ್ಲದೆ ಎಲ್ಲರೊಂದಿಗೆ ಪ್ರೀತಿ ಯಿಂದ ಬೆರೆಯುತ್ತಾರೆ. ದುಬೈನಲ್ಲಿ ದ್ದರು  ಊರಿನವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಆಸ್ಟ್ರೀಲಿ ಯಾ ನ್ಯೂಜಿಲೆಂಡ್ ಗಲ್ಪ್ ರಾಷ್ಟ್ರಕ್ಕೆ ಹೀಗೆ ಅನೇಕ ರಾಷ್ಟ್ರಕ್ಕೆ ಬೇಟಿ ನೀಡಿದರೂ.ಮಂಗಳೂರು ಮತ್ತು ತುಳು ಭಾಷೆಗೆ  ತನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎನ್ನುತ್ತಾರೆ ಕಿಶೋರ್ ಶೆಟ್ಟಿ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts