ಬಂಟ್ವಾಳ: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ ಹಾಗೂ ಕಾರ್ಮಿಕ ಇಲಾಖೆಯ ಮಾಹಿತಿ ಕಾರ್ಯಕ್ರಮ ಮತ್ತು ನೋಂದಣಿ ಅಭಿಯಾನ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಷನ್ ಸಂಸ್ಥಾಪಕ, ಭಾಗವತ ಸತೀಶ್ ಶೆಟ್ಟಿ ಪಟ್ಲ ಉದ್ಘಾಟಿಸಿ ಕಲಾವಿದರು ಸಂಘಟಿತರಾಗಬೇಕು, ಯಕ್ಷಗಾನ ಅಕಾಡೆಮಿಗೆ ಶೀಘ್ರ ಕಲಾವಿದರಿಗಾಗಿ ಮಿಡಿಯುವ ಅಧ್ಯಕ್ಷರ ಶೀಘ್ರ ನೇಮಕವಾಗಬೇಕು ಎಂದರು.
ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ತಾಲೂಕು ಸಂಚಾಲಕ ದಿನೇಶ್ ರಾಯಿ ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಗ್ರೇಸ್ ಮೆಲ್ಬಿನ್ ಅಲ್ಮೇಡ ಅವರು ಕಾರ್ಮಿಕ ಇಲಾಖೆಯ ಮಾಹಿತಿ ನೀಡಿದರು. ಸಂಚಾಲಕ ದಿನೇಶ್ ರಾಯಿ ಸ್ವಾಗತಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು. ಸಹಸಂಚಾಲಕ ರಾಜೇಶ್ ಕೊಯ್ಲ ವಂದಿಸಿದರು. ಪ್ರಮುಖರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಬಿ.ಆರ್. ಕಬಕ, ಹೊನ್ನಪ್ಪ ಶ್ರೀಯಾನ್ ಶಂಭೂರು ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಮರ್ಲಿನ್ ಗ್ರೇಸಿ ಮಾಹಿತಿ ನೀಡಿದರು.