ಬಂಟ್ವಾಳ: ಬಂಟ್ವಾಳ ಮತ್ತು ಮಂಗಳೂರು ತಾಲೂಕು ಸಂಪರ್ಕಿಸುವ ಮೂಲರಪಟ್ಣ ಸೇತುವೆ ಶುಕ್ರವಾರ ಸಂಚಾರಕ್ಕೆ ಮುಕ್ತಗೊಂಡಿತು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಸಹಿತ ಪ್ರಮುಖರು ಸೇತುವೆಯುದ್ದಕ್ಕೂ ಊರವರೊಂದಿಗೆ ಸಂಚರಿಸಿದರು.
ಸೇತುವೆ ನಿರ್ಮಾಣ ಸಂಸ್ಥೆ ಕಾವೂರು ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ ಮಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ದಾಮೋದರ್, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮಾ, ಮುತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಬೊಳ್ಳಾಜೆ, ಗಂಜಿಮಠ ಗ್ರಾ.ಪಂ.ಅಧ್ಯಕ್ಷ ನೋಣಯ್ಯ ಕೋಟ್ಯಾನ್, ತೆಂಕ ಎಡಪದವು ಗ್ರಾ.ಪಂ.ಅಧ್ಯಕ್ಷ ಸುಕುಮಾರ್ ದೇವಾಡಿಗ, ತಾ.ಪಂ.ಮಾಜಿ ಸದಸ್ಯ ನಾಗೇಶ್ ಶೆಟ್ಟಿ, ಬಡಗಬೆಳ್ಳೂರು ಗ್ರಾ.ಪಂ.ಪ್ರಕಾಶ್ ಆಳ್ವ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಯಶೋಧರ ಕರ್ಬೆಟ್ಟು, ಡೊಂಬಯ ಅರಳ, ಪ್ರಸನ್ನ ಕುಮಾರ್ ಶೆಟ್ಟಿ, ನಳಿನಿ ನಾಯ್ಕ, ಎಂ.ಬಿ.ಆಶ್ರಫ್, ಸುದರ್ಶನ್ ಜೈನ್, ನಂದರಾಮ ರೈ, ಸುದರ್ಶನ್ ಬಜ, ಮಹಮ್ಮದ್ ಸಾಲಿ, ಗಣೇಶ್ ರೈ, ರಮನಾಥ ರಾಯಿ, ಸುಪ್ರೀತ್ ಆಳ್ವ, ಕಾರ್ತಿಕ್ ಬಳ್ಳಾಲ್, ಅಶ್ವತ್ ರಾವ್ ಬಾಳಿಕೆ, ಉಮೇಶ್ ಡಿ.ಎಂ, ಉಮೇಶ್ ಅರಳ, ಜಗದೀಶ್ ಆಳ್ವ ಅರಳ ಮೊದಲಾದವರಿದ್ದರು. ಮೂಲರಪಟ್ಣ ಸೇತುವೆ ಸುಮಾರು 13 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬೆಸೆಯುವ ಸೇತುವೆಯು 2018ರಲ್ಲಿ ಏಕಾಏಕಿ ಮಳೆಗೆ ಕುಸಿದು ರಾಜ್ಯದ ಗಮನ ಸೆಳೆದಿತ್ತು. ಸೇತುವೆ ಇಲ್ಲದೆ ಈ ಭಾಗದ ಬಸ್ಸು ಸಂಪರ್ಕ, ವಾಹನ ಸಂಚಾರ ಕಡಿತಗೊಂಡು ಸಾರ್ವಜನಿಕರು ಸಾಕಷ್ಟು ತೊಂದರೆಗೊಳಗಾಗಿದ್ದರು.