ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ಪಡೆದು ಜಾಗವನ್ನು ಹೆದ್ದಾರಿಗೆ ಬಿಟ್ಟುಕೊಡದೇ ಇರುವ ವಿಚಾರದ ಕುರಿತು ಮಂಗಳವಾರ ಮಂಗಳೂರು ಸಹಾಯಕ ಕಮೀಷನರ್ ನೇತೃತ್ವದ ತಂಡ ಕಲ್ಲಡ್ಕ ಭಾಗದಲ್ಲಿ ಸಂಬಂಧಪಟ್ಟ ಜಾಗದ ಮಾಲೀಕರನ್ನು ಭೇಟಿಯಾಗಿ ಮನವೊಲಿಸುವ ಕಾರ್ಯ ನಡೆಸಿದರು.
ಜಾಗ ಬಿಟ್ಟು ಕೊಡದೇ ಇದ್ದರೆ ಸರಕಾರದ ನಿಯಮ ಪ್ರಕಾರ ತೆರವು ಮಾಡಬೇಕಾದ ಕಾರ್ಯ ಮಾಡಲಾಗುವುದು ಎಂದು ಸಹಾಯಕ ಕಮೀಷನರ್ ಮದನ್‌ಮೋಹನ್ ಸಿ. ಎಚ್ಚರಿಸಿದರು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್, ಪಾಣೆಮಂಗಳೂರು ಕಂದಾಯ ನಿರೀಕ್ಷಕ ಧರ್ಮಸಾಮ್ರಾಜ್ಯ, ನರಿಕೊಂಬು ಗ್ರಾಮಕರಣಿಕ ಆತಿಕ್ ಕುಮಾರ್, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ, ಗ್ರಾಮಸಹಾಯಕ ಮೋಹನ್, ಹೆದ್ದಾರಿ ಇಲಾಖೆ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು