ಬಂಟ್ವಾಳ: ಪ್ರವಾದಿ ಮಹಮ್ಮದ್ (ಸ. ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ “ಸ್ನೇಹಸಮ್ಮಿಲನ” ಕಾರ್ಯಕ್ರಮ ಮಾಣಿಯ ರಾಜ್ ಕಮಲ್ ಆಡಿಟೋರಿಯಂನಲ್ಲಿ ನಡೆಯಿತು
ಕಾರ್ಯಕ್ರಮವನ್ನು ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಸಂಯುಕ್ತ ಖಾಝಿಯವರಾದ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು. ಮಾಣಿ ಸೋಶಿಯಲ್ ಇಖ್ವಾ ಫೆಡರೇಷನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ದಾರಿಮಿ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಬಿ.ದಾರಿಮಿ ಮುಖ್ಯ ಭಾಷಣ ಮಾಡಿದರು. ಆಲ್ ಇಂಡಿಯಾ ಇಮಾಂ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಜಾಫರ್ ಸ್ವಾದಿಕ್ ಫೈಝಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯ ಹನೀಫ್ ಖಾನ್ ಕೊಡಾಜೆ, ಮಾಣಿ ಸೋಶಿಯಲ್ ಇಖ್ವಾ ಫೆಡರೇಷನ್ ಉಪಾಧ್ಯಕ್ಷ ರಿಯಾಝ್ ಕಲ್ಲಾಜೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸೋಶಿಯಲ್ ಇಖ್ವಾ ಫೆಡರೇಷನ್ ನ ಗೌರವ ಸಲಹೆಗಾರರಾದ ಮೊಹಮ್ಮದ್ ರಫೀಕ್ ಹಾಜಿ ಸುಲ್ತಾನ್, ಉಮರ್ ಹಾಜಿ ರಾಜ್ ಕಮಲ್, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್, ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಸೂರಿಕುಮೇರು ಜುಮಾ ಮಸೀದಿ ಅಧ್ಯಕ್ಷ ಮೂಸಾ ಕರೀಂ, ಖತೀಬ್ ಇಸ್ಮಾಯಿಲ್ ಆಸಿಫ್ ಹನೀಫಿ, ಕಡೇಶ್ವಾಲ್ಯ ಜುಮಾ ಮಸೀದಿ ಅಧ್ಯಕ್ಷ ಕೆ.ಎಸ್. ಮೊಹಮ್ಮದ್, ನೀರಪಾದೆ ಜುಮಾ ಮಸೀದಿ ಅಧ್ಯಕ್ಷರಾದ ರಶೀದ್ ನೀರಪಾದೆ, ಏನಾಜೆ ಬಿಲಾಲ್ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ದಾರಿಮಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಮೊದಲಾದವರು ಭಾಗವಹಿಸಿದ್ದರು. ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಶರೀಫ್ ಪರ್ಲೊಟ್ಟು, ನವಾಝ್ ಕೊಡಾಜೆ, ಶಂಶೀರ್ ಬುಡೋಳಿ, ಅಶ್ರಫ್ ಮನೋಹರ್, ಆಸಿಫ್ ಮಾಣಿ ಹಾಗೂ ಅಝೀಂ ನೆಲ್ಲಿ ಅವರನ್ನು ಅಭಿನಂದಿಸಲಾಯಿತು. ಸಂಘಟನೆಯ ಕಾರ್ಯವ್ಯಾಪ್ತಿಯ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು.
ಸೋಶಿಯಲ್ ಇಖ್ವಾ ಫೆಡರೇಷನ್ ನ ಮಾಧ್ಯಮ ಕಾರ್ಯದರ್ಶಿ ಪಿ.ಜೆ.ಅಬ್ದುಲ್ ಅಝೀಝ್ ಗಡಿಯಾರ ಸ್ವಾಗತಿಸಿ, ಕಾರ್ಯದರ್ಶಿ ಬಾಶಿತ್ ಬುಡೋಳಿ ಪ್ರಾಸ್ತಾವನೆಗೈದರು. ಶೈಕ್ಷಣಿಕ ಕಾರ್ಯದರ್ಶಿ ಇಂಜಿನಿಯರ್ ಲತೀಫ್ ಕೊಡಾಜೆ ವಂದಿಸಿ, ಸೋಶಿಯಲ್ ಇಖ್ವಾ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು. ಆಂಬುಲೆನ್ಸ್ ಉಸ್ತುವಾರಿಗಳಾದ ಶಬ್ಬೀರ್ ಖಾನ್ ಕಡೇಶ್ವಾಲ್ಯ, ಮಜೀದ್ ಸೂರಿಕುಮೇರು ಹಾಗೂ ಹನೀಫ್ ಸೂರಿಕುಮೇರು ಸಹಕರಿಸಿದರು.