ಅಲೆತ್ತೂರು ಕ್ರಿಯೇಷನ್ಸ್ ಬಿ.ಸಿ.ರೋಡ್, ಅಪ್ಪಚ್ಚಿ ಕ್ರಿಯೇಷನ್ಸ್ ಪುತ್ತೂರು ನಿರ್ಮಾಣ
ಕಹಳೆ ನ್ಯೂಸ್ ಪುತ್ತೂರು ಇದರ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ, ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಚಿತ್ರವು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಚಿತ್ರಕ್ಕೆ ಶುಭ ಹಾರೈಸಿದರು. ಹಿರಿಯ ರಂಗಕರ್ಮಿ, ಬಲ್ನಾಡು ಉಳ್ಳಾಲ್ತಿ ಕ್ಷೇತ್ರದ ಪಾತ್ರಿಬಿ. ಕೃಷ್ಣರಾಜ್ ನಂದಾವರ ಮಾತನಾಡಿ, ತಂಡದ ಒಮ್ಮತದ ಪರಿಶ್ರಮವು ಈ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರಿಯಾಗಿದೆ ಎಂದು ಹೇಳಿದರು. ಹಿರಿಯ ಯಕ್ಷಗಾನ ಕಲಾವಿದ, ಪ್ರಸಾದನ ತಜ್ಞ ವೆಂಕಟೇಶ ಮಯ್ಯ ಆರ್ಯಾಪು ಅವರು ಶುಭ ಹಾರೈಸಿದರು. ಚಿತ್ರದ ನಿರ್ದೇಶಕ ರಾಘವೇಂದ್ರ ಕಾರಂತ್ ಮಾತನಾಡಿ, ಇದೊಂದು ತಿಳಿ ಹಾಸ್ಯದ, ಹಲವು ತಿರುವುಗಳಿಂದ ಕೂಡಿದ, ಕುಟುಂಬ ಸಮೇತರಾಗಿ ನೋಡಬಹುದಾದಂತಹ, ಸಾಂಸಾರಿಕ ಚಿತ್ರ ಎಂದು ಹೇಳಿದರು. ಅಪ್ಪಚ್ಚಿ ಕ್ರಿಯೇಷನ್ಸ್ ಪರವಾಗಿ ವಿನೋದ್ ಭಟ್ ಪುತ್ತೂರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲೆತ್ತೂರು ಕ್ರಿಯೇಷನ್ಸ್ ಪದಾಽಕಾರಿನರಸಿಂಹ ಮಯ್ಯ ಹಾಗೂ ಶರತ್ ಮಯ್ಯ ತಮ್ಮ ಅನುಭವ, ಅಭಿಪ್ರಾಯ ತಿಳಿಸಿದರು. ಅಲೆತ್ತೂರು ಕ್ರಿಯೇಷನ್ಸ್ ನ ಕ್ರಿಯೇಟಿವ್ ಹೆಡ್ ಕಿಶನ್ ನೂಜಿಪ್ಪಾಡಿ ಅವರು, ನವೆಂಬರ್ 1 ರಿಂದ ಅಲೆತ್ತೂರು ಕ್ರಿಯೇಷನ್ಸ್ ಇದರ ಯುಟ್ಯೂಬ್ ಚಾನಲ್‌ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಚಿತ್ರ ನಿರ್ಮಾಣಕ್ಕೆ ಸಹಕರಿಸಿದವರಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಚಿತ್ರದಲ್ಲಿ ವಿನೋದ್ ಭಟ್ ಪುತ್ತೂರು ಅವರ ಕಥೆಯೊಂದಿಗೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವರುಣ್ ರಾವ್, ಶ್ರೀನಿಽ ಭಟ್ ಟಿ.ಎನ್., ಮಿಥುನ್ ರಾಜ್ ವಿದ್ಯಾಪುರ ಸಂಗೀತ ನೀಡಿದ್ದು, ಕಿಶನ್ ನೂಜಿಪ್ಪಾಡಿ ಮತ್ತು ತಂಡದವರ ಛಾಯಾಗ್ರಹಣ, ಸಂದೇಶ ಬಿ. ಅಲೆತ್ತೂರು ಮತ್ತು ತಂಡದವರ ಸಂಕಲನ, ಪ್ರಸಿದ್ಧ ಕವಿ ದಿ. ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಅವರ ಸಾಹಿತ್ಯ, ರಂಗ ಚಾಣಕ್ಯ ರಾಘವೇಂದ್ರ ಕಾರಂತ್ ಮೊಗರ್ನಾಡ್ ಅವರ ಚಿತ್ರಕಥೆ-ಸಾಹಿತ್ಯ, ಸಂಭಾಷಣೆ ಹಾಗೂ ನಿರ್ದೇಶನವಿದೆ…