ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ನವೀಕರಣ ಹಾಗೂ ಮೀಲಾದುನ್ನಬಿ ಪ್ರಯುಕ್ತ ಶನಿವಾರ ರಾತ್ರಿ ಕೇರಳದ ಪ್ರಸಿದ್ಧ ವಾಗ್ಮಿ ಅಲ್ ಹಾಫಿಲ್ ಸಿರಾಜುದ್ದೀನ್ ಅಲ್ ಖಾಸಿಮಿ ಅವರ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಲರಪಟ್ನ ಜುಮಾ ಮಸೀದಿ (ಎಂ.ಜೆ.ಎಂ.)ಯ ಖತೀಬ್ ಅಬ್ದುಸಲಾಂ ಯಮಾನಿ ತುಂಬೆ ಅವರು, ಇಲ್ಲಿನ ಮಸೀದಿಗೆ 800 ವರ್ಷಗಳ ಇತಿಹಾಸ ಇದ್ದು ನಾಡಿನ ಸೌಹಾರ್ದಗೆ ಅಪಾರ ಕೊಡುಗೆಯನ್ನು ನೀಡಿದೆ. ಅದೇ ಸೌಹಾರ್ದತೆ ಮುಂದೆಯೂ ಈ ಊರಿನ ಜನರಿಗೆ ಮಾದರಿಯಾಗಿ ಉಳಿಯಬೇಕು ಎಂದರು.
ಎಂ.ಜೆ.ಎಂ. ಮಾಜಿ ಖತೀಬ್ ಅಲ್ ಹಾಜ್ ಪಿ.ಅಬ್ದುಲ್ ಖಾದರ್ ಮದನಿ ದುಅ ನೆರವೇರಿಸಿದರು. ಎಂ.ಜೆ.ಎಂ. ಅಧ್ಯಕ್ಷ ಎಂ.ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಸ್ತಾವಿಕ ಭಾಷಣ ಗೈದರು. ದ.ಕ. ಮುಸ್ಲಿಮ್ ಜಸ್ಟೀಸ್ ಫೋರಂ ಸದಸ್ಯ ಹನೀಫ್ ಖಾನ್ ಕೋಡಾಜೆ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ಡಿ.ಯು.ಎಂ. ಸದರ್ ಮುಹಲ್ಲಿಂ ಪಿ.ಮುನೀರ್ ಅರ್ಷದಿ, ಫರಂಗಿಪೇಟೆ ಟಿಂಬರ್ ಮರ್ಚೆಂಟ್ ಮಾಲಕರಾದ ಹಾಸೀರ್ ಮೆಲ್ಮನೆ, ಮುಸ್ತಫಾ ಮೆಲ್ಮನೆ, ಮಂಗಳೂರು ಕಿಂಗ್ಸ್ ಮಾರ್ಬಲ್ಸ್ ಆ್ಯಂಡ್ ಗ್ರೈನೆಟ್ಸ್ ಕೋ. ಮಾಲಕ ಮುಹಮ್ಮದ್ ಮುಸ್ತಫಾ, ತೋಡರ್ ಆದರ್ಶ್ ವಿದ್ಯಾಸಂಸ್ಥೆಯ ಚೇರ್ ಮೆನ್ ಆಸೀಫ್, ಉದ್ಯಮಿ ನೌಷದ್ ಹಾಜಿ ಸೂರಲ್ಪಾಡಿ, ದೆಮ್ಮೆಲೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್, ಪಿ.ಡಬ್ಲ್ಯೂಡಿ ಗುತ್ತಿಗೆದಾರ ಎಂ.ಎ.ಹಮ್ಮಬ್ಬ ಮೂಡಿಗೆರೆ, ಗಂಜಿಮಠ ಮಝ್ದಾ ಬೇಕರಿ ಮಾಲಕ ಯೂಸುಫ್ ಹಾಜಿ, ಮೂಲರಪಟ್ನ ಬಾವ ಹಾಜಿ ಹವ್ವಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಉದ್ಯಮಿ ಅಬ್ದುಲ್ಲಾ ಕೋಟೆಬಾಗಿಲು ಮೂಡಬಿದಿರೆ, ಬಿ.ಬಿ.ಎಸ್. ಗುರುವಾಯನಕೆರೆ ಉಸ್ಮಾನ್ ಶಾಫಿ, ಜಿ.ಎಚ್.ಎಂ.ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಶಾಲಿ ಮೊದಲಾದವರು ಉಪಸ್ಥಿತರಿದ್ದರು.
ಮೌಲನಾ ಆಝಾದ್ ಆಂಗ್ಲ ಮಾದರಿ ಶಾಲೆಯ ಪ್ರಾಂಶುಪಾಲ ಹಾಜಿ ಮುಹಮ್ಮದ್ ಹನೀಫ್ ಮಾಸ್ಟರ್ ಮೂರಲಪಟ್ನ ಸ್ವಾಗತಿಸಿದರು. ನ್ಯಾಯವಾದಿ ಅನ್ಸಾರ್ ಧನ್ಯವಾದಗೈದರು. ಸಮಾಜ ಸೇವಕ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.