ಬಂಟ್ವಾಳ: ಹೆದ್ದಾರಿ ಬದಿಯಲ್ಲಿ ಲಾರಿಯಲ್ಲಿ ತ್ಯಾಜ್ಯ ತಂದು ಎಸೆಯುವುದನ್ನು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ನೇತೃತ್ವದಲ್ಲಿ ತಡೆದ ಘಟನೆ ನಡೆದಿದೆ. ಪುದು ಗ್ರಾಮದ ಹತ್ತನೇ ಮೈಲಿಗಲ್ಲು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿಯಲ್ಲಿ 7-8 ಲೋಡ್ ನಷ್ಟು ತ್ಯಾಜ್ಯ ಹಾಕಿದ್ದ ಕುರಿತ ಮಾಹಿತಿ ಪಡೆದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಸದಸ್ಯರು ಲಾರಿಯನ್ನು ನಿಲ್ಲಿಸಿ ಹಾಕಿದ ತ್ಯಾಜ್ಯವನ್ನು ಖಾಲಿ ಮಾಡಿಸಿದರು ಗ್ತಾಪಂ ಸದಸ್ಯ ಇಕ್ಬಾಲ್ ಸುಜೀರ್, ಹುಸೈಲ್ ಪಾಡಿ, ಅಖ್ತರ್ ಹುಸೈನ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಹಾಗೂ ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು. ಪುದು ಗ್ರಾಪಂ ತನ್ನ ವ್ಯಾಪ್ತಿಯಲ್ಲಿ ಹೊರಗಿನಿಂದ ತ್ಯಾಜ್ಯ ತಂದು ಸುರಿಯುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದು, ಈಗಾಗಲೇ ದಂಡವನ್ನೂ ವಿಧಿಸಿದೆ.