ಬಂಟ್ವಾಳ: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳ ವತಿಯಿಂದ ಬಂಟ್ವಾಳದ ನಗರ ಎಸ್.ಐ. ಅವಿನಾಶ್ ಮೂಲಕ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಶಾಲೆ, ಕಾಲೇಜು ಬಿಡುವ ವೇಳೇ ಹುಡುಗಿಯರನ್ನು ಚುಡಾಯಿಸುವ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿತು. ಭಜರಂಗದಳ ಜಿಲ್ಲಾ ಸಹಸಂಚಾಲಕ್ ಗುರುರಾಜ್ ಬಂಟ್ವಾಳ್, ಬಂಟ್ವಾಳ ಪ್ರಖಂಡ ಸಹಸಂಚಾಲಕ್ ಸಂತೋಷ್ ಸರಪಾಡಿ, ದೀಪಕ್ ಅಜೆಕಳ, ಹರೀಶ ಅಮ್ಟಾಡಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…