ಬಂಟ್ವಾಳ: ಉಪ್ಪಿನಂಗಡಿಯಿಂದ ಲಡಾಕ್ ವರೆಗೆ 2984 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಮೂಲಕ ಧಾರ್ಮಿಕ ಸೌಹಾರ್ದ, ಆಹಾರ ಪೋಲು, ರಾಷ್ಟ್ರಧ್ವಜದ ಮಹತ್ವ, ದೇಶಪ್ರೇಮದ ಕುರಿತು ಜಾಗೃತಿ ಮೂಡಿಸಿ, ಮರಳಿ ಉಪ್ಪಿನಂಗಡಿಗೆ ಕಾಲ್ನಡಿಗೆಯಲ್ಲೇ ಸಾಗಿದ ಯುವಕರಾದ ನೌಶಾದ್ ಬಿ.ಕೆ. ಎಸ್ ಮತ್ತು ಅಬ್ದುಲ್ ಹಕೀಂ ಅವರಿಗೆ ಬಂಟ್ವಾಳದ ಕೈಕಂಬ ಹೆದ್ದಾರಿ ಬಳಿ ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಮಾತನಾಡಿ ಯುವಕರ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹಾಗೂ ಬಂಟ್ವಾಳ ಪುರಸಭೆಯ ಸದಸ್ಯರಾದ ಮುನೀಶ್ ಅಲಿ, ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಪುರಸಭಾ ಸಮಿತಿ ಅಧ್ಯಕ್ಷರಾದ ಶೆರೀಫ್.V, ಕಾರ್ಯದರ್ಶಿ ಇಕ್ಬಾಲ್ ಮೈನ್ಸ್, ಕ್ಷೇತ್ರ ಸಮಿತಿ ಸದಸ್ಯರಾದ ಇಕ್ಬಾಲ್ ನಂದರ ಬೆಟ್ಟು, ಎಸ್ಡಿಟಿಯು ಟೆಂಪೋ ಚಾಲಕರ ಸಂಘದ ಅಧ್ಯಕ್ಷ ಅಶ್ರಫ್ ಕೊಡಂಗೆ, ಶಾಂತಿ ಅಂಗಡಿ ಬ್ರಾಂಚ್ ಅಧ್ಯಕ್ಷರಾದ ಇಸಾಕ್ ಅದ್ದೇಡಿ, ಬಶೀರ್ ಪಲ್ಲ, ಮಜೀದ್ ಆಲಡ್ಕ ಸಾಹುಲ್ ತಲಪಾಡಿ, ಅಶ್ರಫ್ ತಲಪಾಡಿ ಮತ್ತು ಇತರರು ಉಪಸ್ಥಿತರಿದ್ದರು.