ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅನಂತಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.
ಗ್ರಾಮದ ಪುಂಜಾವಿನಿಂದ ಕೊಂಬಿಲವರೆಗಿನ ಸಂಪರ್ಕ ರಸ್ತೆಗೆ 1.5 ಕೋ.ರೂ.ಗಳ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ, ಅನಂತಾಡಿ ಗ್ರಾ.ಪಂ.ರಾಜೀವ ಗಾಂಧಿ ಸೇವಾ ಕೇಂದ್ರ ಶಿಲಾನ್ಯಾಸ ಹಾಗೂ ಕರಿಂಕ ದೇವಸ್ಥಾನದ ಬಳಿಯ 50 ಲಕ್ಷ ರೂ. ಗಳ ಸೇತುವೆ ಉದ್ಘಾಟನೆ ನೆರವೇರಿಸಲಾಯಿತು. ಲೋಕೋಪಯೋಗಿ ಎಇಇ ಷಣ್ಮುಗಂ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪಂಕಜ ಶೆಟ್ಟಿ, ಕಾರ್ಯದರ್ಶಿ ಜಯರಾಮ್, ಎಂಜಿನಿಯರ್ ಪ್ರಸನ್ನ, ಅಶ್ವಿನ್ ಉಪಸ್ಥಿತರಿದ್ದರು.ಗ್ರಾ.ಪಂ.ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ ಸ್ವಾಗತಿಸಿದರು. ಪಂಚಾಯತ್ ಅಧ್ಯಕ್ಷ ಗಣೇಶ ಪೂಜಾರಿ, ಉಪಾಧ್ಯಕ್ಷ ಕುಸುಮಾಧರ, ಬಿಜೆಪಿಯ ಪ್ರಮುಖ ನಾಯಕರು, ಗ್ರಾಪಂ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…