ಬಂಟ್ವಾಳ: ಗ್ರಾಮ ವಿಕಾಸ ಸಮಿತಿ ನರಿಕೊಂಬು ಇದರ ವತಿಯಿಂದ ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ೭೧ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವೆ ಹಾಗೂ ಸಮರ್ಪಣ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ನಡೆಯಿತು.
ಪಾಣೆಮಮಗಳೂರಿನ ಶ್ರೀ ಸತ್ಯದೇವತಾ ಗುಡಿಯ ಬಳಿಯಿಂದ ಸ್ವಚ್ಛತಾ ಕಾರ್ಯಕ್ರಮ ಆರಂಭಗೊಂಡು ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಬಳಿ ಸಮಾಪನಗೊಂಡಿತು. ನೂರಾರು ಮಂದಿ ಸಂಘ ಪರಿವಾರ ಕಾರ್ಯಕರ್ತರು, ಪಂಚಾಯತಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಮದಾಸ ಬಂಟ್ವಾಳ ಮಾತನಾಡಿ ಸ್ವಚ್ಛತೆ ಜಾಗತಿಕ ಸಮಸ್ಯೆಯಾಗಿದೆ, ವಿಶ್ವದಾದ್ಯಂತ ಪರಿಸರ ಕಲುಷಿತಗೊಂಡ ಪರಿಣಾಮ ಪ್ರಾಕೃತಿಕ ವೈಪರಿತ್ಯಗಳು ಉಂಟಾಗುತ್ತಿದೆ. ಆದ್ದರಿಂದ ಸ್ವಚ್ಛತೆಯನ್ನು ನಮ್ಮ ದಿನಚರಿಯಾಗಿ ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದವಾದಲ್ಲಿ ನಮ್ಮ ಮುಂದಿನ ತಲೆಮಾರಿಗೆ ಕಲುಷಿತವಾದ ಪ್ರಪಂಚವನ್ನು ಹಸ್ತಾಂತರ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಪರಿಸರಕ್ಕೆ ಪೂರಕವಾದ ಕೆಲಸಗಳನ್ನು ಮಾಡೋಣ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ ಎಂದು ತಿಳಿಸಿದರು.
ಪ್ಲಾಸ್ಟಿಕ್ ಪುನರ್ ಬಳಕೆಯ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ಕಮಲಾಕ್ಷ ಶಂಭೂರು ಮಾಹಿತಿ ನೀಡಿದರು. ಪ್ರಮುಖರಾದ ಜಯಕರ ಅಂತರ ರಾಮನಗರ, ರಾಮಚಂದ್ರ ಪೈ ಪಾಣೆಮಂಗಳೂರು, ಪ್ರವೀಣ್ ಪಲ್ಲತ್ತಿಲ್ಲ, ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್ ಶಂಭೂರು, ಸದಸ್ಯರಾದ ರಂಜಿತ್ ಕೆದ್ದೇಲು, ಪುರುಷೋತ್ತಮ ಎಸ್., ಪ್ರಕಾಶ್ ಕೋಡಿಮಜಲು, ನಾರಾಯಣ ಪೂಜಾರಿ ದರ್ಖಾಸು, ಅರುಣ್ ಕುಲಾಲ್, ಉಷಾ ನಾಯಿಲ, ಚೇತನ್ ಏಲಬೆ, ಪ್ರಮುಖರಾದ ಜಿನರಾಜ್ ಕೋಟ್ಯಾನ್ ಮೈರಡ್ಕ, ಉದಯ ಕುಮಾರ್ ಶೆಟ್ಟಿ ಹೊಸಲಚ್ಚಿಲ್, , ಅಶೋಕ್ ಮರ್ದೊಳಿ, ಗಣೇಶ್ ಕುಮಾರ್ ಅಂತರ, ಪ್ರೇಮನಾಥ ಶೆಟ್ಟಿ ಅಂತರ, ಲಕ್ಷ್ಮೀ ನಾರಾಯಣ ಭಟ್ ನಾಯಿಲ, ರೋಹಿತ್ ಮರ್ದೊಳಿ, ಕೇಶವ ಪಿ.ಎಚ್. ಪಲ್ಲತ್ತಿಲ್ಲ, ನಿತೇಶ್ ನಾಟಿ, ಪುರುಷೋತ್ತಮ ಬಂಗೇರ ನಾಟಿ, ನಾರಾಯಣ ಪೂಜಾರಿ ಕೇದಿಗೆ, ನಾಗೇಶ್ ಪೂಜಾರಿ ಏಲಬೆ, ಹೊನ್ನಪ್ಪ ಶ್ರೀಯಾನ್ ಏಲಬೆ, ನಿತೇಶ್ ಅಂತರ, ವಾಮನ ಕರ್ಬೆಟ್ಟು, , ಸುರೇಶ್ ಕೋಟ್ಯಾನ್ ಮಾಣಿಮಜಲು, ಶ್ರೀಶ ರಾಯಸ, ಕರುಣಾಕರ ಅಂತರ, ಪೂವಪ್ಪ ಪೂಜಾರಿ ಸಂಜಕ್‌ಪಲ್ಕೆ, ರಾಮಚಂದ್ರ ಸಜಂಕ್‌ಪಲ್ಕೆ, , ನವಿನ್ ನಾಟಿ, ಜಯಂತ ಬೈಪಡಿ, ನವಿನ್ ಕರ್ಬೆಟ್ಟು, ಪ್ರಸಾದ್ ಜನತಾಗ್ರಹ, ವಾಮನ ಕುಲಾಲ್ ನಾಟಿ, ದೇವಪ್ಪ ನಾಟಿ, ಪುರುಷೋತ್ತಮ ಮಿಥಿಲ ಕೋಡಿ, ಗಣೇಶ ನಾಟಿ, ಮಧುಕರ ನಾಟಿ, ಕೀರ್ತನ್ ನಾಟಿ, ನಿತೇಶ್ ಬೈಪಡಿ, ದೀಕ್ಷಿತ್ ನಾಟಿ, ಕಿಶನ್ ನಿರ್ಮಲ್, ಅಶೋಕ ಕೇದಿಗೆ ಉಪಸ್ಥಿತರಿದ್ದರು.