ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಮತ್ತು ವಕೀಲರ ಸಂಘ (ರಿ ) ಬಂಟ್ವಾಳ ಆಶ್ರಯದಲ್ಲಿ ಬಂಟ್ವಾಳದ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಗಾಂಧಿ ಜಯಂತಿ ಆಚರಣೆ ಮತ್ತು ಕಾನೂನು ಸೇವೆ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಸಿವಿಲ್ ನ್ಯಾಯಧೀಶರಾದ ಬಾಲಗೋಪಾಲಕೃಷ್ಣ ಅವರು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಲೋಕ ಆಧಾಲತ್ ನ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.ಸಂಪನ್ಮೂಲ ವ್ಯಕಿಯಾಗಿ ಕೇಂದ್ರ ಸರಕಾರದ ಪರ ಜಿಲ್ಲಾ ನ್ಯಾಯವಾದಿ ಮತ್ತು ನೋಟರಿ ವಕೀಲರಾದ ಪ್ರಸಾದ್ ಕುಮಾರ್ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಗಣೇಶಾನಂದ ಸೋಮಯಾಜಿ, ಪುರಸಭೆ ಮುಖ್ಯಧಿಕಾರಿ ಲೀನಾ ಬ್ರಿಟ್ಟೊ, ಸರಕಾರಿ ಅಭಿಯೋಜಕರಾದ ಹರಿಣಿ ಮತ್ತು ಸರಸ್ವತಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಮ್ಯಾ ಎಚ್.ಆರ್. ಅಧ್ಯಕ್ಷತೆಯನ್ನು ವಹಿಸಿದ್ದರು.ವಕೀಲರ ಸಂಘ (ರಿ) ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸರಿತಾ ಫೆರಾವೊ ಸ್ವಾಗತಿಸಿದರು. ಸರಕಾರಿ ಅಭಿಯೋಜಕರಾದ ಸರಸ್ವತಿ ವಂದಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಮೋಹನ್ ಪ್ರಭು, ಕೋಶಾಧಿಕಾರಿ ಚಂದ್ರಶೇಖರ ಡಿ. ಬೈರಿಕಟ್ಟೆ ಮತ್ತಿತರರು ಪಾಲ್ಗೊಂಡಿದ್ದ ಕಾರ್ಯಕ್ರಮದ ಬಳಿಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.