ಬಂಟ್ವಾಳ: ಸಿಎಫ್ಐ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅಂತರಂಗ, ಬಹಿರಂಗ ವಿಚಾರದ ಕುರಿತು ಕಾರ್ಯಾಗಾರ ಶನಿವಾರ ಬಂಟ್ವಾಳದಲ್ಲಿ ನಡೆಯಿತು.
ಆಲ್ ಖಝಾನಾ ಸಮುದಾಯ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷರಾ ಅಶ್ಫಾಕ್ ತಲಪಾಡಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಮಾತನಾಡಿ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಕೇಂದ್ರೀಕರಣ, ಕೇಸರೀಕರಣ ಹಾಗೂ ಖಾಸಗೀಕರಣಕ್ಕೆ ಒತ್ತು ನೀಡುವ ಒಂದು ಕರಡು ಪ್ರತಿಯಾಗಿದ್ದು, ದೇಶದ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಇದರ ವಿರುದ್ಧ ಸಾಕಷ್ಟು ಹೋರಾಟಗಳನ್ನು ಕ್ಯಾಂಪಸ್ ಫ್ರಂಟ್ ನಡೆಸಿದ್ದು ಎಲ್ಲಾ ಜನತೆ ಇದರ ವಿರುದ್ಧ ಹೋರಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಪದವಿ ಕಾಲೇಜು ಉಳ್ಳಾಲ ಇದರ ಪ್ರಾಂಶುಪಾಲರಾದಂತಹ ಅಬ್ದುಲ್ ರಹ್ಮಾನ್ ಮಾತನಾಡಿ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಕ ಸಮುದಾಯವು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಲಿದ್ದು, ಇದು ಶಿಕ್ಷಕ ವಿರೋಧಿ ನೀತಿಯಾಗಿದೆ ಎಲ್ಲಾ ಶಿಕ್ಷಕರು ಇದರ ವಿರುದ್ಧ ಧ್ವನಿಯೆತ್ತಬೇಕು ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸಲೀಂ ಕುಂಪನಮಜಲು ಹಾಗೂ ಬಂಟ್ವಾಳ ಪುರಸಭಾ ಸದಸ್ಯರಾದ ಮುನಿಷ್ ಅಲಿ ಸಂಧರ್ಭ ಮಾತನಾಡಿದರು.
ಕ್ಯಾಂಪಸ್ ಫ್ರಂಟ್ ಬಂಟ್ವಾಳ ಕಾರ್ಯದರ್ಶಿ ಐಮಾನ್ ಬಂಟ್ವಾಳ, ಉಪಾಧ್ಯಕ್ಷರಾದ ಹಮ್ದಾನ್, ಜೊತೆ ಕಾರ್ಯದರ್ಶಿ ಆಸ್ರೀನಾ, ಸಮಿತಿ ಸದಸ್ಯರಾದ ರಿಫಾಝ್, ಹಫಾಝ್, ಫಾರೂಕ್, ಸಿನಾನ್, ಹಾಶಿಮ್, ನಿಯಾಝ್ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಸಫ್ವಾನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು ಮತ್ತು ಶಹೀಮ್ ತುಂಬೆ ವಂದಿಸಿದರು.