ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಗಾಂಧೀ ಜಯಂತಿಯನ್ನು ಕಾಲೇಜು ಆವರಣದ ಸ್ವಚ್ಛತಾ ಕಾರ್ಯಗಳೊಂದಿಗೆ ಆಚರಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಯೂಸುಫ್ ವಿಟ್ಲ ಅವರು ಗಾಂಧೀಜಿಯವರ ಬೋಧನೆಗಳು ಸಾರ್ವಕಾಲಿಕವಾಗಿ ಅನ್ವಯಿಸಬಹುದಾದ ಆದರ್ಶ ಗಳಾಗಿದ್ದು ಅವರ ಬದುಕಿನ ಹೆಜ್ಜೆಗಳು ದೃಢವಾಗಿರುವುದಕ್ಕೆ ಅವರು ನಡೆದ ಸತ್ಯ ಮಾರ್ಗವೇ ಕಾರಣ ಎಂದು ಹೇಳಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಗಾಂಧೀ ಚಿಂತನೆಗಳನ್ನು ಹಂಚಿಕೊಂಡರು. ಎನ್ಎಸ್ಎಸ್ ಯೋಜನಾಧಿಕಾರಿ, ಉಪನ್ಯಾಸಕ ಬಾಲಕೃಷ್ಣ ನಾಯ್ಕ್ ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಧ್ಯಾ ವಂದಿಸಿದರು.ಉಪನ್ಯಾಸಕ ದಾಮೋದರ ಇ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಎನ್ಎಸ್ಎಸ್ ವಿದ್ಯಾರ್ಥಿಗಳು ಕಾಲೇಜು ರಸ್ತೆಯ ಬದಿ ಹಾಗೂ ಆವರಣದ ಗಿಡಗಂಟೆಗಳನ್ನು ಕಡಿದು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ, ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯ ಡಿ.ಎಂ.ಕುಲಾಲ್ ಮತ್ತು ಹಾಲಿ ಸದಸ್ಯರಾದ ಫಾರೂಕ್ ಗೂಡಿನಬಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.