ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152ನೇ ಹುಟ್ಟು ಹಬ್ಬದ ಜಯಂತಿ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ ರಮಾನಾಥ ರೈಯವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.
ಗಾಂಧೀಜಿಯವರು ನಮ್ಮ ದೇಶಕ್ಕೆ ಅಹಿಂಸಾ ಚಳವಳಿಯಿಂದ ಸ್ವಾತಂತ್ರ್ಯವನ್ನು ಗಳಿಸಲು ಮುಂಚೂಣಿಯಲ್ಲಿ ನಿಂತು ಹೋರಾಡಿದ ದಿನಗಳನ್ನು ನೆನೆಯುವುದು ಬಹಳ ಅಗತ್ಯವಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಎಂ ಎಸ್ ಮೊಹಮ್ಮದ್, ಅಬ್ಬಾಸ್ ಆಲಿ, ಸುದರ್ಶನ್ ಜೈನ್, ಜಗನ್ನಾಥ್ ತುಂಬೆ, ಸುರೇಶ್ ಪೂಜಾರಿ ಜೋರ, ಸುಧಾಕರ್ ಶೆಣೈ, ಬಿ ಅರ್ ಅಂಚನ್, ಸದಾನಂದ ಶೆಟ್ಟಿ, ವೆಂಕಪ್ಪ ಪೂಜಾರಿ, ಅಮ್ಮು ಅರಬ್ಬಿಗುಡ್ಡೆ, ಚಿಕ್ಕು ಅರಬ್ಬಿಗುಡ್ಡೆ, ಗಂಗಾಧರ ಪೂಜಾರಿ, ಬಶೀರ್ ಟಿಪ್ಪುನಗರ, ಲಿಂಗಪ್ಪ ಕುಲಾಲ್, ಉಮೇಶ್ ಪೂಜಾರಿ, ಪ್ರತಿಭಾ ಮಂಡಾಡಿ ಉಪಸ್ಥಿತರಿದ್ದರು.